ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೈನಾ, ಸಿಂಧು ಕ್ವಾರ್ಟರ್ ಫೈನಲಿಗೆ

ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೈನಾ, ಸಿಂಧು ಕ್ವಾರ್ಟರ್ ಫೈನಲಿಗೆ

HSA   ¦    Jan 09, 2020 06:43:04 PM (IST)
ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್: ಸೈನಾ, ಸಿಂಧು ಕ್ವಾರ್ಟರ್ ಫೈನಲಿಗೆ

ಕ್ವಾಲಾಲಂಪುರ: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ನಲ್ಲಿ ಸೈನಾ ನೆಹ್ವಾಲ್ ಮತ್ತು ವಿಶ್ವಚಾಂಪಿಯನ್ ಪಿ.ವಿ.ಸಿಂಧು ಕ್ವಾರ್ಟರ್ ಫೈನಲಿಗೆ ದಾಪುಗಾಲಿಟ್ಟಿದ್ದಾರೆ.

ಸಿಂಧು ಪ್ರೀಕ್ವಾರ್ಟ್ ಫೈನಲಿನಲ್ಲಿ ಜಪಾನ್ ನ ಆಯಾ ಒಹೊರಿ ವಿರುದ್ಧ 21-10, 21-15ರಿಂದ ಗೆಲುವು ದಾಖಲಿಸಿಕೊಂಡರು. ಮತ್ತೊಂದು ಪ್ರೀಕ್ವಾರ್ಟರ್ ಫೈನಲಿನಲ್ಲಿ ಸೈನಾ ಆನ್ ಸೆ ಯಾಂಗ್ ವಿರುದ್ಧ 25-23, 21-12ರಿಂದ ಗೆಲುವು ದಾಖಲಿಸಿದರು. ಇದು ಯಾಂಗ್ ವಿರುದ್ಧ ಸೈನಾ ಮೊದಲ ಗೆಲುವಾಗಿದೆ.

ಪುರುಷರ ಸಿಂಗಲ್ಸ್ ನಲ್ಲಿ ಸಮೀರ್ ವರ್ಮಾ ಮತ್ತು ಎಚ್.ಎಸ್. ಪ್ರಣಯ್ ಸೋಲುಂಡು ನಿರ್ಗಮಿಸಿದ್ದಾರೆ.