ಕೊಹ್ಲಿ ಹಾಗೂ ಎಬಿಡಿ ನಡುವೆ ಫಿಟ್ನೆಸ್ ಚಾಲೆಂಜ್, ವೈರಲ್ ಆದ ಟ್ವೀಟ್

ಕೊಹ್ಲಿ ಹಾಗೂ ಎಬಿಡಿ ನಡುವೆ ಫಿಟ್ನೆಸ್ ಚಾಲೆಂಜ್, ವೈರಲ್ ಆದ ಟ್ವೀಟ್

MS   ¦    Mar 30, 2021 06:11:48 PM (IST)
ಕೊಹ್ಲಿ ಹಾಗೂ ಎಬಿಡಿ ನಡುವೆ ಫಿಟ್ನೆಸ್ ಚಾಲೆಂಜ್, ವೈರಲ್ ಆದ ಟ್ವೀಟ್

ಚೆನ್ನೈ: 14ನೇ ಆವೃತ್ತಿಯ ಬಹುನಿರೀಕ್ಷಿತ ಐಪಿಎಲ್‌ ಟೂರ್ನಿಗೆ ಕೌಂಟ್‌ಡೌನ್‌ ಆರಂಭವಾಗಿರುವ ಬೆನ್ನಲ್ಲೇ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್‌ ಪರಸ್ಪರ ಫಿಟ್ನೆಸ್‌ ಚಾಲೆಂಜ್‌ ಹಾಕಿಕೊಂಡಿದ್ದಾರೆ.

ಕೊಹ್ಲಿ, ತಾವು ಥ್ರೆಡ್‌ಮಿಲ್‌ ಮೇಲೆ ಓಡುತ್ತಿರುವ ವಿಡಿಯೋವನ್ನು ಟ್ವೀಟ್‌ ಮಾಡಿ 'ವಿಶ್ರಾಂತಿಯೇ ಇಲ್ಲ. ಇಲ್ಲಿಂದ ಏನಿದ್ದರೂ ವೇಗಕ್ಕೆ ಪ್ರಾಮುಖ್ಯತೆ' ಎಂದು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಬಿಡಿ, 'ನಿಮ್ಮ ಲಯ ಖುಷಿ ನೀಡುತ್ತಿದೆ. ತಂಡ ಸೇರಿಕೊಳ್ಳಲು ಹೊರಟಿದ್ದೇನೆ' ಎಂದರು. ಇದಕ್ಕೆ ಉತ್ತರಿಸಿದ ಕೊಹ್ಲಿ, 'ನೀವು ವಿಕೆಟ್ಸ್‌ ಮಧ್ಯೆ ಈಗಲೂ ಅತಿವೇಗದ ಓಟಗಾರರಾಗಿದ್ದೀರಿ ಎಂದು ಭಾವಿಸುತ್ತೇನೆ' ಎಂದಿದ್ದಾರೆ.

ಈ ರೀತಿಯ ಟ್ವೀಟ್ ಗಳ ಮೂಲಕ ಮಾತನಾಡಿರುವ ಕ್ರಿಕೆಟ್ ಆಟಗಾರರ ಫಿಟ್ನೆಸ್ ಚಾಲೆಂಜ್ ಗಳು ಆರ್ ಸಿ ಬಿ ಅಭಿಮಾನಿಗಳಲ್ಲಿ ಮತ್ತೆ ಉತ್ಸಾಹ ಹೆಚ್ಚಿಸಿದೆ. ಇಷ್ಟೇ ಅಲ್ಲದೆ, ಇವರಿಬ್ಬರ ನಡುವೆ ಯುವ ಆಟಗಾರ ದೇವದತ್ ಪಡಿಕ್ಕಲ್‌ ಕೂಡ ಟ್ವೀಟ್ ಮೂಲಕ ಛಾಲೆಂಜಿಗೆ ತಾವು ಸೇರುವುದಾಗಿ ತಿಳಿಸಿದ್ದಾರೆ.