ದಾಖಲೆ ಸನಿಹದಲ್ಲಿ ಸ್ಪಿನ್ನರ್ ಆರ್. ಅಶ್ವಿನ್

ದಾಖಲೆ ಸನಿಹದಲ್ಲಿ ಸ್ಪಿನ್ನರ್ ಆರ್. ಅಶ್ವಿನ್

HSA   ¦    Feb 24, 2021 10:18:57 AM (IST)
ದಾಖಲೆ ಸನಿಹದಲ್ಲಿ ಸ್ಪಿನ್ನರ್ ಆರ್. ಅಶ್ವಿನ್

ಅಹ್ಮದಾಬಾದ್: ಇಲ್ಲಿನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ನಲ್ಲಿ ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಹೊಸ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.

ಹೊಸದಾಗಿ ನಿರ್ಮಾಣವಾಗಿರುವ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಅಶ್ವಿನ್ 400 ವಿಕೆಟ್ ಪಡೆಯುವ ಹೆಬ್ಬಾಗಿಲಿನಲ್ಲಿ ಇರುವರು. ಅವರು ಇದಾಗಲೇ 394 ವಿಕೆಟ್ ಉರುಳಿಸಿರುವರು.

ಮೊಟೆರಾದಲ್ಲಿ ನಡೆಯಲಿರುವ ಗುಲಾಬಿ ಚೆಂಡಿನ ಪಂದ್ಯದಲ್ಲಿ ಅಶ್ವಿನ್ ಆರು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದರೆ ಆಗ ನ್ಯೂಜಿಲೆಂಡ್ ನ ಮಾಜಿ ವೇಗಿ ರಿಚರ್ಡ್ ಹೆಡ್ಲಿ ಮತ್ತು ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ದಾಖಲೆ ಮುರಿಯುವರು. ಶ್ರೀಲಂಕಾದ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಕೇವಲ 72 ಟೆಸ್ಟ್ ಗಳಲ್ಲಿ ಈ ಮೈಲುಗಲ್ಲು ಮುಟ್ಟಿದ್ದರು.