News Kannada
Thursday, July 07 2022

ಕ್ರೀಡೆ

ಡಬ್ಲ್ಯುಟಿಎ ಫೈನಲ್ಸ್ : 2ನೇ ಬಾರಿ ಚಾಂಪಿಯನ್ ಪಟ್ಟವೇರಿದ ಸಾನಿಯಾ - 1 min read

Photo Credit :

ಡಬ್ಲ್ಯುಟಿಎ ಫೈನಲ್ಸ್ : 2ನೇ ಬಾರಿ ಚಾಂಪಿಯನ್ ಪಟ್ಟವೇರಿದ ಸಾನಿಯಾ

ಸಿಂಗಾಪುರ: ವಿಶ್ವ ನಂಬರ್ ಒನ್ ಡಬಲ್ಸ್ ತಾರೆ ಸಾನಿಯಾ ಮಿರ್ಜಾ ಸ್ವಿಜರ್ಲೆಂಡ್ ನ ಮಾರ್ಟಿನಾ ಹಿಂಗಿಂಸ್ ಜತೆಗೂಡಿ ಸಿಂಗಾಪುರದಲ್ಲಿ ನಡೆದ ಪ್ರತಿಷ್ಠಿತ ಡಬ್ಲ್ಯುಟಿಎ ಫೈನಲ್ಸ್ ಟೆನಿಸ್ ಚಾಂಪಿಯನ್ ಷಿಪ್ ನಲ್ಲಿ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಕೊಂಡಿದ್ದಾರೆ.

Sania-Martina clinch WTA Finals title -1
ಫೈನಲ್‌ ಪಂದ್ಯದಲ್ಲಿ ಸ್ಪಾನಿಷ್‌ ಆಟಗಾರ್ತಿಯರಾದ ಗಾರ್ಬಿನ್‌ ಮುಗುರುಜಾ ಮತ್ತು ಕಾರ್ಲಾ ಸುವಾರೇಜ್‌ ನವಾರೋ ಜೋಡಿ ವಿರುದ್ಧ 6-0 ,6-3 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದರು. ಇದು ಸಾನಿಯಾ-ಹಿಂಗಿಸ್‌ ಜೋಡಿ  ಈ ವರ್ಷ ಆಡಿದ ದ 10ನೇ ಫೈನಲ್‌ ಪಂದ್ಯದಲ್ಲಿ  9ನೇ ಡಬಲ್ಸ್‌ ಪ್ರಶಸ್ತಿ ಗೆಲ್ಲುವಮೂಲಕ ದಾಖಲೆ ಬರೆದಿದ್ದಾರೆ.

2004ರಲ್ಲಿ ವೃತ್ತಿಪರ ಟೆನಿಸ್ ರಂಗ ಪ್ರವೇಶಿಸಿದ ಹೈದರಾಬಾದ್ ನ ಮೂಗುತಿ ಸುಂದರಿ ಸಾನಿಯಾಗೆ ಇದು ಈವರೆಗಿನ ಅತ್ಯಂತ ಯಶಸ್ವಿ ವರ್ಷವೆನಿಸಿದೆ. 2013ರಲ್ಲಿ 5 ಡಬಲ್ಸ್ ಪ್ರಶಸ್ತಿ ಗೆದ್ದಿದ್ದು ಅವರ ಹಿಂದಿನ ಶ್ರೇಷ್ಠ ಸಾಧನೆ. ಸಾನಿಯಾ-ಹಿಂಗಿಸ್ ಎಪ್ರಿಲ್ ನಲ್ಲಿ ವಿಶ್ವ ನಂ.1 ಜೋಡಿಯಾಗಿದ್ದಲ್ಲದೆ, ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಸತತ 2 ಗ್ರಾಂಡ್ ಸ್ಲಾಂಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.  ವರ್ಷಾಂತ್ಯದಲ್ಲಂತೂ ಪ್ರಚಂಡ ನಿರ್ವ ಹಣೆ ತೋರಿ ಅಜೇಯ ಜೋಡಿಯಾಗಿ ಮುನ್ನಡೆದು ತಮಗೆ ತಾವೇ ಸಾಟಿ ಎನಿಸಿದರು.

See also  ಆಳ್ವಾಸ್ ನಲ್ಲಿ ವರಿಷ್ಠ ಕ್ರೀಡಾಕೂಟ 2016
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು