ಮೊಹಾಲಿ: ಗಾಂಧಿ-ಮಂಡೇಲಾ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 108ರನ್ಗಳ ಜಯಭೇರಿ ಬಾರಿಸಿತು.
ಟೀಂ ಇಂಡಿಯಾ ನೀಡಿದ 218 ರನ್ ಗಳ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 108 ರನ್ ಗಳಿಗೆ ಪತನಗೊಂಡಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಮೊದಲ ಜಯ ಗಳಿಸಿದೆ. ರವೀಂದ್ರ್ ಜಡೇಜಾ 5, ಆರ್. ಅಶ್ವೀನ್ 3 ಅವರ ಸ್ಪಿನ್ ದಾಳಿಗೆ ಸಿಲುಕಿದ ಆಫ್ರಿಕಾ ತಂಡ ಕೇವಲ 109 ಆಲೌಟ್ ಆಗುವ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ 0-1 ಹಿನ್ನಡೆ ಪಡೆದುಕೊಂಡಿತು.