ಹೊಸದಿಲ್ಲಿ: ದೆಹಲಿಯ ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಜಯಗಳಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ ಕೈವಶ ಮಾಡಿಕೊಂಡಿದ್ದು, ನಾಲ್ಕನೇ ದಿನದಾಟಕ್ಕೆ ಆಫ್ರಿಕಾ ತಂಡ 2 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತ್ತು. ಇಂದು ಕಣಕ್ಕೀಳಿದ ಹಶೀಮ್ ಆಮ್ಲಾ ಮತ್ತು ನಾಯಕ ಎಬಿಡಿ ವಿಲಿಯರ್ಸ್ ಮತ್ತೆ ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಅಶ್ವಿನ್ ಎಸೆತಕ್ಕೆ ವಿಲಿಯರ್ಸ್(43) ಔಟಾಗಿ ಪೆವಿಲಿಯನ್ ಸೇರಿದರೆ, ಆಲ್ಮಾ(25) ಜಡೇಜಾ ಬೌಲಿಂಗ್ ನಲ್ಲಿ ಔಲ್ಡ್ ಆದರು.