ಆಸ್ಟ್ರೇಲಿಯಾ: ಭಾರತದ ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದಾರೆ.
ಪರ್ತ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭರ್ಜರಿ ಆಟವಾಡುತ್ತಿರುವ ರೋಹಿತ್ ತಮ್ಮ ಜೀವನದ 9ನೇ ಏಕದಿನ ಶತಕ ಹಾಗೂ ಆಸ್ಟ್ರೇಲಿಯಾ ವಿರುದ್ಧದ 4ನೇ ಶತಕ ದಾಖಲಿಸಿ ಆಡುತ್ತಿದ್ದಾರೆ. 88 ರನ್ಗಳಿಸಿ ಆಡುತ್ತಿರುವ ವಿರಾಟ್ ಕೊಹ್ಲಿ 2ನೇ ವಿಕೆಟ್ ಜತೆಯಾಟದಲ್ಲಿ ರೋಹಿತ್ಗೆ ಸಾತ್ ನೀಡುತ್ತಿದ್ದಾರೆ.
ಟೀಮ್ ಇಂಡಿಯಾ ಉಪನಾಯಕ ವಿರೋಟ್ ಕೊಹ್ಲಿ ಪರ್ತ್ ಏಕದಿನ ಪಂದ್ಯದಲ್ಲಿ ಶತಕ ವಂಚಿತರಾಗಿದ್ದಾರೆ. 91ರನ್ಗಳಿಸಿ ಶತಕದತ್ತ ನುಗ್ಗುತ್ತಿದ್ದ ಕೊಹ್ಲಿ ಬೇಜವಾಬ್ದಾರಿ ಹೊಡೆತಕ್ಕೆ ವಿಕೆಟ್ ಒಪ್ಪಿಸಿದರು. ಶಿಖರ್ ಧವನ್ ಔಟಾದ ನಂತರ ರೋಹಿತ್ ಜತೆಯಾದ ಕೊಹ್ಲಿ ಎರಡನೇ ವಿಕೆಟ್ ಗೆ 207ರನ್ ಸೇರಿಸಿದರು.