ಹೊಸದಿಲ್ಲಿ: ಮಾರ್ಚ್ 19ರಂದು ನಡೆಯುವ ಭಾರತ-ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯಕ್ಕೆ ಅವಕಾಶ ನೀಡಬಾರದು ಎಂದು ವಿವಿಧ ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದರೂ ಬಿಸಿಸಿಐ ಮಾತ್ರ ನಡೆಸಿಯೇ ಬಿಡುತ್ತೇವೆ ಎಂದು ಹಣ ತೊಟ್ಟಿದೆ.
ಮಂಗಳವಾರ ಹಿಮಾಚಲ ಪ್ರದೇಶ ಸಿಎಂ ವೀರಭದ್ರಸಿಂಗ್ ಧರ್ಮಶಾಲಾದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಸೂಕ್ತ ಭದ್ರತೆ ನೀಡುವಂತೆ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅದರಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭಾರತಕ್ಕೆ ಆಗಮಿಸುವ ಪಾಕ್ ತಂಡಕ್ಕೆ ಕೇಂದ್ರ ಅರೆಸೇನಾ ಪಡೆಗಳ ಮೂಲಕ ಭದ್ರತೆ ಒದಗಿಸುವುದಾಗಿ ಹೇಳಿದ್ದಾರೆ. ಪಾಕ್ ತಂಡಕ್ಕೆ ರಕ್ಷಣೆ ನೀಡುವಂತೆ ಕೇಳಿದ್ದ ಹಿಮಾಚಲ ಪ್ರದೇಶ ಸಿಎಂ ಮನವಿಯಂತೆ ನಾವು ರಕ್ಷಣಾ ಪಡೆಯನ್ನು ನಿಯೋಜನೆ ಮಾಡಿದ್ದೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.