News Kannada
Monday, September 26 2022

ಕ್ರೀಡೆ

ಪತ್ರಕರ್ತರ ಪ್ರಶ್ನೆಗೆ ಹಾಸ್ಯ ಚಟಾಕಿಯ ಉತ್ತರ ನೀಡಿದ ರೈನಾ - 1 min read

Photo Credit :

ಪತ್ರಕರ್ತರ ಪ್ರಶ್ನೆಗೆ ಹಾಸ್ಯ ಚಟಾಕಿಯ ಉತ್ತರ ನೀಡಿದ ರೈನಾ

ಹೊಸದಿಲ್ಲಿ: ಪತ್ರಕರ್ತರ ಪ್ರಶ್ನೆಗಳಿಗೆ ನಸು ನಗುವಿಕೆಯಲ್ಲಿ ಉತ್ತರ ನೀಡಿ ನಗೆಗಡಲಲ್ಲಿ ತೇಲಿಸಿದ್ದಾರೆ ಭಾರತ ತಂಡದ ಕ್ರಿಕೆಟ್ ಆಟಗಾರ ರೈನಾ.

ಟೀಂ ಇಂಡಿಯಾಗೆ ವಿದೇಶಿಗ ಕೋಚ್ ಬೇಕೋ, ಭಾರತೀಯ ಕೋಚ್ ಬೇಕೋ? ಎಂದು ಪತ್ರಕರ್ತರೊಬ್ಬರು ರೈನಾಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ರೈನಾ, ನೀವು ನಿಮ್ಮ ಹೆಂಡತಿಯೊಂದಿಗೆ ನೆಮ್ಮದಿಯಿಂದ ಇರುತ್ತೀರೋ ಅಥವಾ ಇನ್ನೊಬ್ಬನ ಹೆಂಡತಿಯೊಂದಿಗೆ? ಎಂದು ಉತ್ತರಿಸಿದ ಕೂಡಲೇ ಅಲ್ಲಿ ನಗೆಯ ಅಲೆ ತೇಲಿ ಬಂತು. ಧೋನಿಯವ ಪ್ರಭಾವವೋ ಏನೋ ಇದೀಗ ಸುರೇಶ್ ರಯನಾ ಕೂಡಾ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ರೀತಿ ಹಾಸ್ಯದ ಉತ್ತರವನ್ನು ನೀಡುವುದನ್ನು ಕಲಿತು ಬಿಟ್ಟಿದ್ದಾರೆ.

ಕೋಚ್ ಸ್ಥಾನಕ್ಕೆ  ಹಲವಾರು ಕ್ರಿಕೆಟಿಗರ ಹೆಸರು ಕೇಳಿ ಬರುತ್ತಿದ್ದರೂ, ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಶನಿವಾರ ಆರಂಭವಾಗಲಿರುವ ಐಪಿಎಲ್ ಟೂರ್ನಮೆಂಟ್‌ನಲ್ಲಿ ಗುಜರಾತ್ ಲಯನ್ಸ್ ತಂಡವನ್ನು ರೈನಾ ಮುನ್ನಡೆಸಲಿದ್ದಾರೆ.

See also  ನಿಮ್ಮ ತಂಡ ಟ್ರೋಫಿ ಗೆಲ್ಲದಿದ್ದರೆ, ನೀವು ಗಳಿಸುವ ರನ್ ಗಳು, ಶತಕಗಳಿಗೆ ಯಾವುದೇ ಅರ್ಥವಿರುವುದಿಲ್ಲ : ರೋಹಿತ್ ಶರ್ಮಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು