News Kannada
Wednesday, September 28 2022

ಕ್ರೀಡೆ

ರೆಸ್ಲರ್ ನರಸಿ೦ಗ್ ಯಾದವ್ ಗೆ ಹಲ್ಲೆ ಭೀತಿ - 1 min read

Photo Credit :

ರೆಸ್ಲರ್ ನರಸಿ೦ಗ್ ಯಾದವ್ ಗೆ ಹಲ್ಲೆ ಭೀತಿ

ಹೊಸದಿಲ್ಲಿ: ಮುಂಬರುವ ರಿಯೊ ಒಲಿಂಪಿಕ್ಸ್ ನಲ್ಲಿ ಸ್ಥಾನ ಗಿಟ್ಟಿಸುವ ಸಲುವಾಗಿ ಖ್ಯಾತ ರೆಸ್ಲರ್ ಸುಶೀಲ್ ಕುಮಾರ್ ಹಾಗೂ ನರಸಿಂಗ್ ಯಾದವ್  ಶೀತಲ ಸಮರ ಗ೦ಭೀರ ಹ೦ತ ತಲುಪಿದ್ದು,  ಹರ್ಯಾಣ ಪೊಲೀಸ್‍ನ ಅಪರಾಧ ತನಿಖಾ ವಿಭಾಗ (ಸಿಐಡಿ), ರೆಸ್ಲರ್ ನರಸಿ೦ಗ್ ಯಾದವ್ ಮೇಲೆ ಸಾಯ್‍ನ ಸೋನೆಪತ್‍ನಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದ ವೇಳೆ ಹಲ್ಲೆ ನಡೆಯುವ  ಕುರಿತು ಎಚ್ಚರಿಕೆ ರವಾನಿಸಿದೆ.

ಈ ಬಗ್ಗೆ ಹರ್ಯಾಣದ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ತರಬೇತಿ ಶಿಬಿರಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದಾರೆ. ಹೊರಗಿನ ಕೆಲವರಿ೦ದ ರೆಸ್ಲರ್ ನರಸಿ೦ಗ್ ಯಾದವ್ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ವ್ಯಕ್ತವಾಗಿದ್ದು, ಗುರುವಾರದಿ೦ದಲೇ ಸಾಯ್ ಆವರಣದಲ್ಲಿ ಪೊಲೀಸ್ ನಿಯೋಜನೆ  ಮಾಡಲಾಗಿದೆ. ಬುಧವಾರ ಶಿಬಿರ ಆರ೦ಭವಾಗಿದ್ದರೂ, ಗುರುವಾರದವರೆಗೂ ನರಸಿ೦ಗ್ ಶಿಬಿರಕ್ಕೆ ಹಾಜರಾಗಿರಲಿಲ್ಲ. 2016ರ ರಿಯೋ ಒಲಿ೦ಪಿಕ್ಸ್‍ಗೆ ಅಹ೯ತೆ ಪಡೆದ ರೆಸ್ಲರ್ ಗಳು ಸಾಯ್  ಬಾಲಗ್ರಹ ಕೇ೦ದ್ರದಲ್ಲಿ ತರಬೇತಿ ನಡೆಸಲು ವ್ಯವಸ್ಥೆ ಮಾಡಲಾಗಿದೆ ಮೂಲಗಳಿಂದ ತಿಳಿದು ಬಂದಿದೆ.

ನನ್ನ ಮೇಲೆ ಇದ್ದಕ್ಕಿದ್ದಂತೆ ಹಲ್ಲೆ ಮಾಡಲು ಹೇಗೆ ಸಾಧ್ಯ? ನಾನು ಮತ್ತು ಸುಶೀಲ್ ಸಹೋದರರಂತೆ ಇದ್ದೇವೆ. ಯಾರೋ ಉದ್ದೇಶಪೂವ೯ಕವಾಗಿ ಹಲ್ಲೆ ನಡೆಸುವ ಸಾಧ್ಯತೆ ಇಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ ಎಂದು ರೆಸ್ಲರ್ ನರಸಿಂಗ್ ಯಾದವ್  ಹೇಳಿದ್ದಾರೆ.

See also  ಐಪಿಎಲ್ ನಲ್ಲಿ ಬೆಟ್ಟಿಂಗ್ ಒಪ್ಪಿಕೊಂಡ ನಟ ಅರ್ಬಾಜ್ ಖಾನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು