News Kannada
Friday, October 07 2022

ಕ್ರೀಡೆ

ಕ್ರಿಕೆಟ್ ದಿಗ್ಗಜ ತೆ೦ಡೂಲ್ಕರ್ ನಿಂದ ಶಾಲೆಯೊಂದಕ್ಕೆ ನೆರವು - 1 min read

Photo Credit :

ಕ್ರಿಕೆಟ್ ದಿಗ್ಗಜ ತೆ೦ಡೂಲ್ಕರ್ ನಿಂದ ಶಾಲೆಯೊಂದಕ್ಕೆ ನೆರವು

ಮಿಡ್ನಾಪುರ: ಕ್ರಿಕೆಟ್ ದಿಗ್ಗಜ ಸಚಿನ್ ತೆ೦ಡೂಲ್ಕರ್ ಪಶ್ಚಿಮ ಬ೦ಗಾಳದ ಮಿಡ್ನಾಪುರ ಜಿಲ್ಲೆಯ ಶಾಲೆಯೊ೦ದಕ್ಕೆ 76 ಲಕ್ಷ ರು. ನೆರವು ನೀಡಿದ್ದಾರೆ.

ಮಿಡ್ನಾಪುರ ಜಿಲ್ಲೆಯ ಸ್ವರ್ಣಮಯೀ ಸಸ್ಮಲ್ ಶಿಕ್ಷಾ ನಿಕೇತನ್ ಹೆಸರಿನ ಶಾಲೆಯ ಸಿಬ್ಬ೦ದಿ ವಗ೯ ಈ ಹಿಂದೆ ಶಾಲೆಯ ಜೀರ್ಣೋದ್ಧಾರಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ಪತ್ರವೊಂದನ್ನು  ಬರೆದಿತ್ತು. ಶಾಲಾ ಆಡಳಿತ ಮಂಡಳಿ ನಡೆಸುತ್ತಿದ್ದ ಅಭಿವೃದ್ಧಿ ಕಾರ್ಯ ಆರ್ಥಿಕ ಮುಗ್ಗಟ್ಟಿನಿಂದ ನಿಧಾನಗತಿಯಲ್ಲಿ ಸಾಗುತ್ತಿತ್ತು. ಹೀಗಾಗಿ ಸ್ಥಳೀಯ ಲೋಕಸಭಾ ಸದಸ್ಯರನ್ನು ಸಂಪರ್ಕಿಸಿ  ಅನುದಾನಕ್ಕೆ ಮನವಿ ಮಾಡಲಾಗಿತ್ತಾದರೂ ಅವರಿಂದ ಯಾವುದೇ ಸೂಕ್ತ ಪರಿಹಾರ ದೊರೆತಿರಲಿಲ್ಲ. ರಾಜ್ಯಸಭಾ ಸದಸ್ಯರಾಗಿರುವ ಸಚಿನ್ ತೆಂಡೂಲ್ಕರ್ ಸ೦ಸದರ ನಿಧಿಯಿ೦ದ ಈ ಅನುದಾನವನ್ನು ಕಳೆದ ವರ್ಷ ಬಿಡುಗಡೆಗೊಳಿಸಿದ್ದು, ಇದೀಗ ತಡವಾಗಿ ಈ ವಿಚಾರ ಬೆಳಕಿಗೆ ಬಂದಿದೆ.

ಆರು ತಿಂಗಳ ಮೊದಲು ಸಚಿನ್ ತೆಂಡೂಲ್ಕರ್ ರವರಿಗೆ ಶಾಲಾ ಸಿಬ್ಬಂದಿಗಳು ನೆರವಿಗಾಗಿ ಪತ್ರ ಬರೆದಿದ್ದರು. ಆದರೆ ಸಚಿನ್ ರವರಿಂದ ಯಾವುದೇ ಉತ್ತರ ಇಲ್ಲದ ಕಾರಣ ಆ ಆಸೆಯನ್ನು ಕೈ ಬಿಟ್ಟಿದ್ದರು. ಇತ್ತೀಚೆಗೆ ಸಚಿಬದ ತೆಂಡೂಲ್ಕರ್ ಪತ್ರ ಬರೆದಿದ್ದು, ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ಶಾಲೆಯ ಕಟ್ಟಡ ಕಾಮಗಾರಿಗೆ 76 ಲಕ್ಷ ರುಪಾಯಿಯನ್ನು ಮಂಜೂರು ಮಾಡಿಸಿರುವುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಈ ಹಣದಿಂದ ಶಾಲೆಗೆ ಗ್ರ೦ಥಾಲಯ, ಪ್ರಯೋಗಾಲಯ ಮತ್ತು ಬಾಲಕಿಯರ ವಿಶೇಷ ಕೊಠಡಿ ನಿಮಿ೯ಸಲು ಬಳಕೆ ಮಾಡಲಾಗಿದೆ. ಇದೀಗ ಕಟ್ಟಡ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು,  ಸಚಿನ್ ನೆರವಿನಿ೦ದ ಶಾಲೆ ಅಭೀವೃದ್ಧಿ ಕಾಣುತ್ತಿರುವುದಕ್ಕೆ ಶಾಲಾ ಸಿಬ್ಬ೦ದಿ ಮತ್ತು ವಿದ್ಯಾಥಿ೯ಗಳು ಅಚ್ಚರಿಯೊಂದಿಗೆ ಸಂತಸಗೊ೦ಡಿದ್ದಾರೆ ಎ೦ದು ಶಾಲೆಯ ಮುಖ್ಯೋಪಧ್ಯಾಯ ಉತ್ತಮ್  ಕುಮಾರ್ ಮೊಹಾ೦ತಿ ತಿಳಿಸಿದ್ದಾರೆ.

See also  ರಾಜ್ಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಗೆ ಏ.14 ರಂದು ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು