ರವಿಶಾಸ್ತ್ರಿ ಅವರ ಹೇಳಿಕೆಯಿಂದ ನನಗೆ ನಿಜವಾಗಲೂ ನೋವಾಗಿದೆ. ಅವರು ರೀತಿ ಪ್ರತಿಕ್ರಿಯಿಸುತ್ತಾರೆ ಎಂದು ನಾನು ಭಾವಿಸಿರಲಿಲ್ಲ ಎಂದು ಸೌರವ್ ಗಂಗೂಲಿ ಅವರು ರವಿಶಾಸ್ತ್ರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಸಲಹಾ ಸಮಿತಿ ನಡೆಸಿದ ಸಂದರ್ಶನದ ವೇಳೆ ನಾನು ಹಾಜರಾಗಿದ್ದಾಗ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಗೈರಾಗಿದ್ದು, ನನಗೆ ಅಗೌರವ ತೋರಿದ್ದಾರೆ ಎಂಬ ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರು ಆರೋಪ ಮಾಡಿದ್ದರು. ರವಿಶಾಸ್ತ್ರಿಯವರ ಹೇಳಿಕೆಯಿಂದ ಗಂಗೂಲಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತಂಡದ ಕೋಚ್ ಹುದ್ದೆ ಸಂದರ್ಶನದ ಸಮಯದಲ್ಲೇ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾಗಿದ್ದ ನಾನು ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸುವುದಾಗಿ ಮುಂಚೆಯೇ ತೀರ್ಮಾನಿಸಲಾಗಿತ್ತು. ಇದೇ ಕಾರಣದಿಂದಾಗಿ ನಾನು ಸಂದರ್ಶನದ ಸಮಯದಲ್ಲಿ ಅಲ್ಲಿರಲು ಸಾಧ್ಯವಾಗಿರಲಿಲ್ಲ. ಆದರೆ ಬಳಿಕ ನಡೆದ ಸಂದರ್ಶನದ ವೇಳೆ ಶಾಸ್ತ್ರಿ ಅವರು ಬ್ಯಾಂಕಾಕ್ ನಲ್ಲಿ ಹಾಲಿಡೇಯಲ್ಲಿದ್ದರು. ಈ ವೇಳೆ ಸ್ಕೈಪ್ ಮೂಲಕ ಸಂದರ್ಶನ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.