News Kannada
Thursday, September 29 2022

ಕ್ರೀಡೆ

ಪುರುಷರ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡ ವಿಜಯಶಾಲಿ - 1 min read

Photo Credit :

ಪುರುಷರ ರಾಜ್ಯಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡ ವಿಜಯಶಾಲಿ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ನಡೆದ ಆಹ್ವಾನಿತ ಪುರುಷರ ರಾಜ್ಯಮಟ್ಟದ ಬಾಲ್ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆಳ್ವಾಸ್ ತಂಡ ವಿಜಯಶಾಲಿಯಾಗಿದೆ.

ರಾಜ್ಯಮಟ್ಟದ 6 ಆಹ್ವಾನಿತ ತಂಡಗಳೊಂದಿಗೆ ಲೀಗ್ ಮಾದರಿಯಲ್ಲಿ ಪಂದ್ಯಗಳು ನಡೆದವು. ಮೊದಲ ಸೆಮಿಫೈನಲ್ ಹಂತದಲ್ಲಿ ಆಳ್ವಾಸ್ ಹಾಗೂ  ಬೆಂಗಳೂರಿನ ಬನಶಂಕರಿ ತಂಡಗಳು ಮುಖಾಮುಖಿಯಾದವು. ಮೊದಲ ಸೆಮಿಫೈನಲ್ ನಲ್ಲಿ ಮುನ್ನಡೆ ಪಡೆದ ಆಳ್ವಾಸ್ ತಂಡ ಗೆಲುವು ಸಾಧಿಸಿತು. ಎರಡನೇ ಸೆಮಿಫೈನಲ್ ಹಂತದಲ್ಲಿ ಚಾಮರಾಜನಗರ ಹಾಗೂ ಕೆನರಾ ಬ್ಯಾಂಕ್ ತಂಡಗಳು ಸೆಣಸಾಟ ನಡೆಸಿದವು. ಈ ಹಂತದಲ್ಲಿ ಕೆನರಾ ತಂಡ ರೋಚಕ ಗೆಲುವನ್ನು ಪಡೆದು ಫೈನಲ್ ಗೆ ಲಗ್ಗೆಯಿಟ್ಟಿತು.

ಫೈನಲ್ ಹಂತದಲ್ಲಿ ಆಳ್ವಾಸ್ ಹಾಗೂ ಕೆನರಾ ತಂಡಗಳು ಚಾಂಪಿಯನ್ ಶಿಪ್ ಗಾಗಿ ಮುಖಾಮುಖಿಯಾದವು. ಮೊದಲ ಸೆಟ್ ನಲ್ಲಿ ಆಳ್ವಾಸ್ ತಂಡವು 35-30 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ಎರಡನೆಯ ಸೆಟ್ ನಲ್ಲಿಯೂ ಸಹ ಉತ್ತಮ ಪ್ರದರ್ಶನವನ್ನು ಮುಂದುವರೆಸಿದ ಆಳ್ವಾಸ್ ತಂಡ 35-22 ಅಂಕಗಳನ್ನು ಮೂಲಕ ಪ್ರಬಲ ಕೆನರಾ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕೆನರಾ ತಂಡ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು.

ಆಳ್ವಾಸ್ ನ ರಂಜಿತ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಏಕಲವ್ಯ ಪ್ರಶಸ್ತಿ ವಿಜೇತ ಮುಹಮ್ಮದ್ ಇಲಿಯಾನ್ ಹಾಗೂ ಉಮೇಶ್ ಶೆಟ್ಟಿ ವಿಜೇತರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
 

See also  ಮಾಯಾಂಕ್ ಭರ್ಜರಿ ದ್ವಿಶತಕ: ಬೃಹತ್ ಮೊತ್ತ ಪೇರಿಸಿದ ಭಾರತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು