News Kannada
Monday, September 26 2022

ಕ್ರೀಡೆ

ಮಂಗಳೂರು ವಿವಿ ಅಂತರ್ ಕಾಲೇಜು ಗುಡ್ಡಗಾಡು ಓಟ : ಆಳ್ವಾಸ್ ಗೆ ಪ್ರಶಸ್ತಿ - 1 min read

Photo Credit :

ಮಂಗಳೂರು ವಿವಿ ಅಂತರ್ ಕಾಲೇಜು ಗುಡ್ಡಗಾಡು ಓಟ : ಆಳ್ವಾಸ್ ಗೆ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರು ವಿವಿ ಅಂತರ್ ಕಾಲೇಜು ಗುಡ್ಡಗಾಡು ಓಟ ಸ್ಪರ್ಧೆಯ ಮಹಿಳೆಯರ ಹಾಗು ಪುರುಷರ ಎರಡು ವಿಭಾಗದಲ್ಲಿ ಆಳ್ವಾಸ್ ಕಾಲೇಜು ತಂಡ ಚಾಂಪಿಯನ್ನಾಗಿ ಮೂಡಿ ಬಂದಿದೆ.

ಎರಡು ವಿಭಾಗದಲ್ಲಿ ಸತತ 13ನೇ ವರ್ಷದಿಂದ ಅಳ್ವಾಸ್ ತಂಡ ಈ ಸಾಧನೆಯನ್ನು ತನ್ನಲ್ಲೆ ಉಳಿಸಿಕೊಂಡು ದಾಖಲೆ ನಿರ್ಮಿಸಿದೆ. ಆಳ್ವಾಸ್ ನ ಪುರುಷರ ತಂಡ ಚಾಂಪಿಯಶನ ಶಿಪ್ ಗೆಲ್ಲುವ ಮೂಲಕ ಕುರುಂಜಿ ವೆಂಕಟರಮಣ ಗೌಡ ಸ್ಮಾರಕ ಪರ್ಯಾಯ ಫಲಕವನ್ನು ಹಾಗು ಮಹಿಳೆಯರ ವಿಭಾಗದ ಚಾಂಪಿ0ಯನ್ ಶಿಪ್ ಗಾಗಿ ಕೈಕುರಿ ರಾಮಣ್ಣ ಗೌಡ ಪರ್ಯಾಯ ಫಲಕವನ್ನು ತನ್ನದಾಗಿಸಿಕೊಂಡಿದೆ.

ಪುರುಷರ ವಿಭಾಗದಲ್ಲಿ ಉಜಿರೆ ಎಸ್ಡಿಎಂ ತಂಡ ರನ್ನರ್ ಅಪ್ ಮತ್ತು ಕೆ.ಎಸ್.ಎಸ್ ಕಾಲೇಜು ಸುಬ್ರಹ್ಮಣ್ಯ ತಂಡ ತೃತೀಯ ಸ್ಥಾನ ಪಡಕೊಂಡಿತು. ಮಹಿಳೆಯರ ವಿಭಾಗದಲ್ಲಿ ಉಜಿರೆ ಎಸ್ಡಿಎಂ  ತಂಡ ರನ್ನರ್ ಅಪ್ ಮತ್ತು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ತೃತೀಯ ಸ್ಥಾನ ಪಡೆಯಿತು.

ಪುರುಷರ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸ್ ನ ಕುಂಭಾರ್ ಕಂಟಿಲಾಲ್ ದೇವರಾಮ್, ರಂಜಿತ್ ಕುಮಾರ್ ಪಾಟಿಲ್ ಮತ್ತು ರಾಬಿನ್ ಸಿಂಗ್ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ನ ಚೌಹಾನ್ ಜ್ಯೋತಿ ಜಗ್ ಬಹುದ್ದೂರ್, ಗವಾಲಿ ಯೋಗಿತ ಗುಲಾಬ್ ಹಾಗೂ  ಸಿಂಗ್ ರಿಶು ದಲಿಸ್ ನಗರ್ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗೆದ್ದುಕೊಂಡರು.

ಮಂಗಳೂರು ವಿವಿ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಈ ಸ್ಪರ್ಧೆ ನಡೆಯಿತು. ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಅಭಚಂದ್ರ ಜೈನ್ ವಿಜೇತರಿಗೆ ಬಹುಮಾನ ವಿತರಿಸಿದರು. ಮಾಜಿ ಸಚಿವ ಅಮರನಾಥ ಶೆಟ್ಟಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ  ಕಿಶೋರ್ ಕುಮಾರ್ ಶೆಟ್ಟಿ, ಜಿಲ್ಲಾ ಅಥ್ಲೆಟಿಕ್ ತರಬೇತುದಾರ ದಾಮೋದರ ಗೌಡ ಉಪಸ್ಥಿತರಿದ್ದರು. ಯುವಸಬಲೀಕರಣ ಇಲಾಖೆಯ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಆಳ್ವಾಸ್ ಸಿಪಿಎಡ್ ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ್ ಉಪಸ್ಥಿತರಿದ್ದರು.   

See also  ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಗೆ ಅದ್ದೂರಿ ಚಾಲನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು