ಮೂಡುಬಿದಿರೆ: ಎಸ್.ಡಿ.ಎಂ. ಡೆಂಟಲ್ ಕಾಲೇಜು, ಧಾರವಾಡದಲ್ಲಿ ನಡೆದ ರಾಜೀವ್ ಗಾಂದಿ ಆರೋಗ್ಯ ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಗುಡ್ಡಗಾಡು ಚಾಂಪಿಯನ್ ಶಿಲ್ಲಿ ಮೂಡುಬಿದಿರೆಯ ಆಳ್ವಾಸ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕಾಲೇಜು ಪುರುಷರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಪುರುಷರ 12ಕಿ.ಮೀ ಸ್ಪರ್ಧೆಯಲ್ಲಿ ಆಳ್ವಾಸ್ ನ ವಿದ್ಯಾರ್ಥಿಗಳಾದ ಸಮೀರ್ ಸಾವಂತ್ -ಪ್ರಥಮ, ದಿನಕರ್ ಮಹಲೆ-ದ್ವಿತೀಯ, ಮಹೇಶ್ ಪಾಟೀಲ್-ತೃತೀಯ, ಕಾಯಂ ಶೇಖ್-ನಾಲ್ಕನೇ ಸ್ಥಾನ, ದತ್ತ ಬೊರಸೆ- 5ನೇ ಸ್ಥಾನ ಹೀಗೆ ಮೊದಲ 5 ಸ್ಥಾನವನ್ನು ಆಳ್ವಾಸ್ನ ವಿದ್ಯಾರ್ಥಿಗಳು ಪಡೆದುಕೊಂಡರು. ಆಳ್ವಾಸ್ ನ 6 ಮಂದಿ ಕ್ರೀಡಾಪಟುಗಳು ಅಖಿಲ ಭಾರತ ಅಂತರ್ ವಿ.ವಿ. ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.