ನವದೆಹಲಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಹೇಜೆಲ್ ಜೊತೆ ವಿವಾಹವಾಗಿದ್ದು, ಇದೀಗ ಹೆಜೆಲ್ ತನ್ನ ಹೆಸರನ್ನು ಗುರ್ ಬಸಂತ್ ಕೌರ್ ಎಂದು ಬದಲಿಸಿಕೊಂಡಿದ್ದಾರೆ.ನವೆಂಬರ್ 30 ರಂದು ಸಿಖ್ ಸಂಪ್ರದಾಯದಂತೆ ಯುವರಾಜ್ ಸಿಂಗ್ ವಿವಾಹವಾಗಿದ್ದರು. ಹೇಜೆಲ್ ಕೀಚ್ ಅವರ ತಂದೆ ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದು, ತಾಯಿ ಹಿಂದೂ ಧರ್ಮಕ್ಕೆ ಸೇರಿದ್ದರು. ಇದರಿಂದಾಗಿ ಹೇಜೆಲ್ ಕೀಚ್ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು, ಹೇಜೆಲ್ ಕೀಚ್ ತಾಯಿ ಹಿಂದೂ ಧರ್ಮದವರಾಗಿದ್ದರಿಂದ ಹಿಂದು ಸಂಪ್ರದಾಯದಂತೆ ಗೋವಾದಲ್ಲಿ ಮದುವೆ ನಡೆಯಿತು. ಯುವಿ ಬಹಳ ಗೌರವಿಸುವ ಬಾಬಾ ರಾಮ್ ಸಿಂಗ್ ಸಲಹೆಯಂತೆ ಹೇಜೆಲ್ ಕೀಚ್ ಹೆಸರನ್ನು ಗುರ್ ಬಸಂತ್ ಕೌರ್ ಎಂದು ಬದಲಾಯಿಸಲಾಗಿದೆ.
ಯುವಿಗಾಗಿ ಹೆಸರು ಬದಲಾಯಿಸಿದ ಪತ್ನಿ ಹೇಜೆಲ್ ಕೀಚ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.