ಹೊಸದಿಲ್ಲಿ: ಮರ್ಸಿಡಿಸ್ ತಂಡದ ಜರ್ಮನ್ ಚಾಲಕ ಫಾರ್ಮುಲ್ ಒನ್ ವಿಶ್ವ ಚಾಂಪಿಯನ್ 31 ವರ್ಷದ ನಿಕೋ ರಾಸ್ಬರ್ಗ್ ಹಠಾತ್ ನಿವೃತ್ತಿ ಘೋಷಿಸಿ ರೇಸ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಒಟ್ಟು 23 ಗ್ರ್ಯಾನ್ ಪ್ರೀನಲ್ಲಿ ರಾಸ್ಬರ್ಗ್ ಜಯ ಸಾಧಿಸಿದ್ದು, 2016 ಮರ್ಸಿಡಿಸ್ ತಂಡದಲ್ಲಿ ವಿಶ್ವಚಾಂಪಿಯನ್ ಆಗಿದ್ದ ಇವರು ತಮ್ಮ ಫೇಸ್ ಬುಕ್ ನಲ್ಲಿ ನಿವೃತ್ತಿ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಅಬುಧಾಬಿಯಲ್ಲಿ ಕಳೆದ ಭಾನುವಾರ ನಡೆದ ಗ್ರ್ಯಾನ್ ಪ್ರೀ ರಾಸ್ಬರ್ಗ್ ಅವರ ಕೊನೆಯ ರೇಸ್ ಮತ್ತು ಇಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಎಫ್-1 ರೇಸ್ ಗೆ ಬಹ್ರೇನ್ ಗ್ರ್ಯಾನ್ ಪ್ರಿಕ್ಸ್ ಮೂಲಕ 2006ರಲ್ಲಿ ಎಂಟ್ರಿ ಕೊಟ್ಟಿದ್ದರು.