ಮಡಿಕೇರಿ: ಕುಂಬಳದಾಳುವಿನ ನವಚೇತನ ಯುವಕ ಸಂಘ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 17ನೇ ವರ್ಷದ ಮುಕ್ತ ವಾಲಿಬಾಲ್ ಮತ್ತು ಥ್ರೋಬಾಲ್ ಪಂದ್ಯಾವಳಿಗಳು ಡಿ.25 ರಂದು ಕುಂಬಳದಾಳು ಶಾಲಾ ಮೈದಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯುವಕ ಸಂಘದ ನಿರ್ದೇಶಕ ಕೆ.ಪಿ. ದಿನೇಶ್ ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ನೆಹರು ಯುವ ಕೇಂದ್ರ, ತಾಲ್ಲೂಕು ಯುವ ಒಕ್ಕೂಟ, ಕನ್ನಿಕಾ ಯುವತಿ ಮಂಡಳಿ, ಸ್ತ್ರೀ ಶಕ್ತಿ ಮತ್ತು ಸ್ವಸಹಾಯ ಸಂಘಗಳ ಸಂಯುಕ್ತಾಶ್ರಯದಲ್ಲಿ ಕುಂಬಳದಾಳು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಡಿ.25 ರಂದು ಬೆಳಗ್ಗೆ 9 ಗಂಟೆಯಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ. ಕಾಫಿ ಬೆಳೆಗಾರರಾದ ಕರ್ಣಯ್ಯನ ಬಿ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಾಲಿಬಾಲ್ ಪಂದ್ಯಾವಳಿಯನ್ನು ಕಾಫಿ ಬೆಳೆಗಾರರಾದ ನೆರವಂಡ ಕಮಲ ಮತ್ತು ಕುಟುಂಬಸ್ಥರು ಉದ್ಘಾಟಿಸಲಿದ್ದಾರೆಂದರು.
ಥ್ರೋಬಾಲ್ ಪಂದ್ಯಾವಳಿಯನ್ನು ಕಾಫಿ ಬೆಳೆಗಾರರಾದ ಬೊಬ್ಬಿರ ಗಿರೀಶ್ ಮತ್ತು ಕುಟುಂಬಸ್ಥರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹೊದ್ದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಕುಲ್ಲಚನ ಪಿ. ದಿನೇಶ್, ಕುಂಬಳದಾಳು ಗ್ರಾಮ ಪಂಚಾಯ್ತಿ ಸದಸ್ಯರಾದ ಪಿ.ಎ. ನಾರಾಯಣ, ಕಾಫಿ ಬೆಳೆಗಾರರಾದ ತೆಕ್ಕಡೆ ಮೋಹನ್ ಪಾಲ್ಗೊಳ್ಳಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಾದ ತೆಕ್ಕಡೆ ಶೋಭಾ ಮೋಹನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಪಂ ಸದಸ್ಯರಾದ ಮುರಳಿ ಕರುಂಬಮ್ಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷರಾದ ಮನು ಮುತ್ತಪ್ಪ, ಕಾಫಿ ಬೆಳೆಗಾರರಾದ ಸಾಬು ತಿಮ್ಮಯ್ಯ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮೀ ಬಾಯಿ, ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷರಾದ ನವೀನ್ ದೇರಳ, ಗ್ರಾಪಂ ಸದಸ್ಯ ಹೆಚ್.ಎ. ಹಂಸ ಹಾಗೂ ಬೆಳೆಗಾರರಾದ ದಂಬೆಕೋಡಿ ಸುಬ್ರಮಣಿ ಪಾಲ್ಗೊಳ್ಳಲಿದ್ದಾರೆ.
ದಾನಿಗಳ ಸಹಕಾರದಿಂದ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆಯೆಂದು ತಿಳಿಸಿದ ಕೆ.ಪಿ.ದಿನೇಶ್, ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವವರು ಡಿ.20ರ ಬಳಗೆ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದರು. ಹೆಚ್ಚಿನ ವಿವರಗಳಿಗೆ 8861411442, 9880994980,9481067656 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷರಾದ ಭೀಮಾ ರಾಜ್, ಗೌರವ ಕಾರ್ಯದರ್ಶಿಯಾದ ರಾಜೇಶ್, ನೆರವಂಡ ಬೆಳ್ಯಪ್ಪ ಹಾಗೂ ಎಂ.ಬಿ. ಸುಬ್ಬಯ್ಯ ಉಪಸ್ಥಿತರಿದ್ದರು.