ಮುಂಬೈ: ಟೀಂ ಇಂಡಿಯಾದ ಗೆಲುವಿನ ಪಯಣ ಮುಂದುವರಿದಿದ್ದು, 4 ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-0 ಮುನ್ನಡೆ ಸಾಧಿಸಿದೆ. ನಾಯಕ ಕೊಹ್ಲಿ ಮೂರು ದ್ವಿಶತಕ ಒಂದೇ ವರ್ಷದಲ್ಲಿ ಭಾರಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. 340 ಎಸೆತ 235 ರನ್ ಇದರಲ್ಲಿ 25 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡಿದೆ. ಜೊತೆಗೆ ಜಯಂತ್ ಯಾದವ್ ಅವರ 104 ರನ್, 204 ಎಸೆತ, 15 ಬೌಂಡರಿ, ಈ ಭರ್ಜರಿ ಆಟದಿಂದ ಟೀಂ ಇಂಡಿಯಾ 231 ರನ್ಗಳ ಮುನ್ನಡೆ ಜೊತೆಗೆ 631 ರನ್ಗಳ ಬೃಹತ್ ಮೊತ್ತವನ್ನು ಮೊದಲ ಇನಿಂಗ್ಸ್ನಲ್ಲಿ ದಾಖಲಿಸಿತ್ತು.
ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡವು ಎರಡನೇ ಇನಿಂಗ್ಸ್ ನಲ್ಲಿ 195 ರನ್ ಗಳಿಸಿ, 55.3 ಓವರ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ ಸೋಲಿಗೆ ಶರಣಾಯಿತು.
ಒಂದು ವರ್ಷದಲ್ಲಿ ನಾಲ್ಕು ದ್ವಿಶತಕ ಗಳಿಸಿ ಆಸ್ಟ್ರೇಲಿಯಾದ ಮೈಕೆಲ್ ಕ್ಲಾರ್ಕ್ ಮೊದಲ ಸ್ಥಾನದಲ್ಲಿದ್ದರೆ. ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಸರಿಗಟ್ಟಿಸಿದ್ದ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಸ್ಕೋರ್ ವಿವರ :ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 400 ರನ್, ಭಾರತ ಪ್ರಥಮ ಇನಿಂಗ್ಸ್ 631(182.3 ಓವರ್) ದ್ವಿತೀಯ ಇನಿಂಗ್ಸ್ ಇಂಗ್ಲೆಂಡ್ 6ಕ್ಕೆ 195(55.3 ಓವರ್)