ಬೆಂಗಳೂರು: ಬೆಂಗಳೂರಿನಲ್ಲಿ ನಡೆದ 11ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ನ ಟೈಟಲ್ ಭಾರತದ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಡಿ.5 ರಂದು ಪ್ರಾರಂಭವಾಗಿರುವ 11ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲು ಪಂಕಜ್ ಅಡ್ವಾಣಿ ಬೆಂಗಳೂರಿಗೆ ಆಗಮಿಸಿದ್ದು, 11ನೇ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ನ ಟೈಟಲ್ ಪಡೆದುಕೊಂಡಿದ್ದಾರೆ.
ಹಾಲಿ ಚಾಂಪಿಯನ್ ಪಂಕಜ್ ಅಡ್ವಾಣಿ ಫೈನಲ್ಸ್ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಸಿಂಗಾಪುರದ ಪೀಟರ್ ಗಿಲ್ಕ್ರಿಸ್ಟ್ ವಿರುದ್ಧ 151 (98)-33, 150 (97)-95, 124-150, 101 (98)-150 (89), 150 (87)-50, 152-37, 86 (86)-150, 151 (110)-104, 150 (88)-15 ಅಂತರದಿಂದ ಗೆಲುವು ಸಾಧಿಸಿದರು. ಬೆಂಗಳೂರು: ಭಾರತದ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಬೆಂಗಳೂರಿನಲ್ಲಿ ನಡೆದ 11ನೇ ವಿಶ್ವ ಬಿಲಿಯರ್ಡ್ಸ್ (150-Up format) ಚಾಂಪಿಯನ್ ಶಿಪ್ನ ಟೈಟಲ್ ತಮ್ಮದಾಗಿಸಿಕೊಂಡಿದ್ದಾರೆ.