ಬ್ರಿಸ್ಬೇನ್: ಪಾಕ್ ಕ್ರಿಕೆಟಿಗರ ಹಳೇ ಚಾಳಿ ಮತ್ತೆ ಮುಂದುವರಿದಿದೆ. ಪಾಕ್ ಆಟಗಾರರಾದ ವಹಾಬ್ ರಿಯಾಜ್ ಮತ್ತು ಯಾಸಿರ್ ಶಾ ಆಸ್ಟ್ರೇಲಿಯ ವಿರುದ್ಧದ ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೂ ಮುನ್ನ ಜಗಳವಾಡಿ ಕಿರಿಕ್ ಮಾಡಿಕೊಂಡಿದ್ದಾರೆ.
ಪಾಕ್ ಕ್ರಿಕೆಟ್ ಮಂಡಳಿ ಮಾತ್ರ ಈ ಸುದ್ದಿಯನ್ನು ತಳ್ಳಿ ಹಾಕಿದ್ದು, ಯಾವ ಸಮಸ್ಯೆಯೂ ತಂಡದಲಿಲ್ಲ ಎಂದು ಹೇಳಿದೆ. ಮಾತ್ರವಲ್ಲ ಸ್ವತಃ ಜಗಳ ಮಾಡಿಕೊಂಡಿರುವ ರಿಯಾಜ್, ನಾವು ಜಗಳವೇ ಮಾಡಿಲ್ಲ, ನಾವಿಬ್ಬರೂ ಸ್ನೇಹಿತರು ಎಂದು ಹೇಳಿಕೆ ನೀಡಿ ತಪ್ಪಿಸಿಕೊಂಡಿದ್ದಾರೆ.
ಬುಧವಾರ ರಿಸ್ಬೇನ್ನ ಗಾಬಾ ಕ್ರೀಡಾಂಗಣದಲ್ಲಿ ಪಾಕ್ ಆಟಗಾರರು ಫುಟ್ಬಾಲ್ ಆಡುತ್ತಿದ್ದಾಗ ರಿಯಾಜ್-ಶಾ ನಡುವೆ ವಾಗ್ವಾದ ಶುರುವಾಗಿದ್ದು, ತಳ್ಳಾಟವು ನಡೆಯಿತು. ಯಾಸಿರ್ ಶಾಗೆ ಕೋಪದ ಭರದಲ್ಲಿ ರಿಯಾಜ್ ಎದೆಯಿಂದ ಗುದ್ದಿದ ಘಟನೆ ಕೂಡ ನಡೆದಿದೆ.