ಚೆನ್ನೈ: ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಐದನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, 157.2 ಓವರ್ಗಳಿಗೆ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ ಆಲೌಟ್ ಆಗಿದ್ದು, 477 ರನ್ ಗಳಿಸಿದೆ.
ಆರಂಭದಲ್ಲೇ ಇಂಗ್ಲೆಂಡ್ ತಂಡ ಆಘಾತ ಅನುಭವಿಸಿದ್ದು, ಕೇಟನ್ ಜಿನಿಂಗ್ಸ್ 1 ರನ್ ಜೊತೆಗೆ ನಾಯಕ ಅಲಸ್ಟೇರ್ ಕುಕ್ ಕೇವಲ 10 ರನ್ ಗೆ ಔಟಾಗಿದ್ದರು.
4 ವಿಕೆಟ್ ನಷ್ಟಕ್ಕೆ ಮೊದಲ ದಿನದಾಟದ ಆಂತ್ಯಕ್ಕೆ ಕೆ 284 ರನ್ ಗಳಿಸಿದ್ದು, ಎರಡನೇ ದಿನವಾದ ಶನಿವಾರ ಆಟ ಆರಂಭಿಸಿದ ಮೊಹಿನ್ ಅಲಿ 146 ರನ್ ಗಳಿಸಿ, ಉಮೇಶ್ ಯಾದವ್ ಬೌಲಿಂಗ್ ನಲ್ಲಿ ಔಟಾದರು. ನಂತರ ಉತ್ತಮ ಜತೆಯಾಟ ಆಡಿದ ಆದಿಲ್ ರಶೀದ್, ಲಿಯಾಮ ಡಾಸನ್ ನೆರವಿನಿಂದ ಇಂಗ್ಲೆಂಡ್ ಬೃಹತ್ ಮೊತ್ತವನ್ನು ದಾಖಲಿಸಿದೆ.
ಇಂಗ್ಲೆಂಡ್: ಅಲಸ್ಟೇರ್ ಕುಕ್ 10, ಕೇಟನ್ ಜಿನಿಂಗ್ಸ್ 1, ಜೋ ರೂಟ್ 88, ಜಾನಿ ಬೆಸ್ಟೊವ್ 49, ಮೊಹಿನ್ ಅಲಿ 146, ಬೆನ್ ಸ್ಟೋಕ್ಸ್ 6, ಜಾಸ್ ಬಟ್ಲರ್ 5, ಆದಿಲ್ ರಶೀದ್ 60, ಸ್ಟುವರ್ಟ್ ಬ್ರಾಡ್ 19, ಜೇಕ್ ಬಾಲ್ 12, ಲಿಯಾಮ ಡಾಸನ್ ಬ್ಯಾಟಿಂಗ್ 66 ರನ್.
ಭಾರತ: ರವೀಂದ್ರ ಜಡೇಜ 3, ಉಮೇಶ್ ಯಾದವ್ 2, ಇಶಾಂತ್ ಶರ್ಮಾ 2, ರವಿಚಂದ್ರನ್ ಅಶ್ವಿನ್ 1, ಅಮಿತ್ ಮಿಶ್ರಾ 1 ವಿಕೆಟ್ ಪಡೆದು ಮಿಂಚಿದ್ದಾರೆ.
ವಿಕೆಟ್ ನಷ್ಟವಿಲ್ಲದೆ ಭಾರತ ಮೊದಲ ಇನಿಂಗ್ಸ್ ನಲ್ಲಿ 44 ರನ್ ದಾಖಲಿಸಿದೆ. (ಕೆ.ಎಲ್ ರಾಹುಲ್ 26 ರನ್, ಪಾರ್ಥಿವ್ ಪಟೇಲ್17 ರನ್)