ಹೊಸದಿಲ್ಲಿ: ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್, ತಾಂಜಾನಿಯಾದ ಫ್ರಾನ್ಸಿಸ್ ಚೆಕಾ ಅವರನ್ನು ಸೋಲಿಸುವ ಮೂಲಕ ಸತತ 8ನೇ ಬಾರಿಗೆ ಏಷ್ಯಾ ಪೆಸಿಫಿಕ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿಜೇಂದರ್ 3 ಸುತ್ತಿನಲ್ಲಿ 39-37, 37-38, 39-37 ಅಂತರದಿಂದ ಚೆಕಾ ಅವರನ್ನು ತ್ಯಾಗರಾಜ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸೋಲಿಸಿದರು.
34 ವರ್ಷದ ಫ್ರಾನ್ಸಿಸ್ ಅವರನ್ನು ವಿಜೇಂದರ್ ಅವರು ಕೇವಲ ಹತ್ತು ನಿಮಿಷಗಳಲ್ಲೇ ಸೋಲಿಸಿದರು. 10 ಸುತ್ತುಗಳು ನಡೆಯ ಬೇಕಿದ್ದ ಪಂದ್ಯ ಕೇವಲ 3 ಸುತ್ತಿನಲ್ಲಿ ಅಂತ್ಯವಾಯಿತು.
ಡಬ್ಲ್ಯುಬಿಒ ಏಷ್ಯಾ ಪೆಸಿಫಿಕ್ ಚಾಂಪಿಯನ್ ಪ್ರಶಸ್ತಿಯನ್ನು ವಿಜೇಂದರ್ ಈ ಮೂಲಕ ಸತತ 8ನೇ ಬಾರಿ ಗೆದ್ದು, ಗೆಲುವಿನ ನಗೆ ಬೀರಿದರು.