ವಿಶಾಖಪಟ್ಟಣ: ಕರ್ನಾಟಕ ರಣಜಿ ತಂಡ ತಮಿಳುನಾಡು ತಂಡದ ಬೌಲರ್ ಗಳ ದಾಳಿಗೆ ಸೋತು ಟೂರ್ನಿಯಿಂದ ನಿರ್ಗಮಿಸಿದೆ.
ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ತಂಡ 88 ರನ್ ಗಳಿಗೆ ಮೊದಲ ಇನಿಂಗ್ಸ್ನಲ್ಲಿ ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್ನಲ್ಲೂ ಕೂಡ ಅಲ್ಪ ಮೊತ್ತ ದಾಖಲಿಸಿತು. ಇದರ ಸಂಪೂರ್ಣ ಸದುಪಯೋಗ ಪಡೆದುಕೊಂಡ ಟೀಂ ತಮಿಳುನಾಡು ಸುಲಭವಾಗಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿತು.
ಈ ಮೂಲಕ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಿಂಚಿದ ಕೆ.ಎಲ್ ರಾಹುಲ್(199) ಮತ್ತು ಅಜೇಯ ತ್ರಿಶತಕ ಸಿಡಿಸಿದ ಕರುಣ್ ನಾಯರ್(303) ರಾಜ್ಯ ತಂಡದಲ್ಲಿದ್ದರೂ ಕೂಡ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಮೂಲಕ ಈ ಬಾರಿಯ ರಣಜಿಯಲ್ಲಿ ಜಯ ಸಾಧಿಸುವ ಕರ್ನಾಟಕ ತಂಡದ ಕನಸು ಕನಸಾಗಿಯೇ ಉಳಿಯಿತು.
ಸ್ಕೋರ್ ವಿವರ ಹೀಗಿದೆ :
ಕರ್ನಾಟಕ ಮೊದಲ ಇನಿಂಗ್ಸ್: 88/10
ತಮಿಳುನಾಡು ಮೊದಲ ಇನಿಂಗ್ಸ್: 152/10
ಕರ್ನಾಟಕ ಎರಡನೇ ಇನಿಂಗ್ಸ್: 150/10
ತಮಿಳುನಾಡು ಎರಡನೇ ಇನಿಂಗ್ಸ್: 87/3