ಚೆನ್ನೈ: ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಆರ್. ಅಶ್ವಿನ್ ಎರಡನೇ ಮಗುವಿಗೆ ತಂದೆಯಾಗಿದ್ದಾರೆ.
ಈ ಬಾರಿಯ ವರ್ಷದ ಐಸಿಸಿ ಕ್ರಿಕೆಟಿಗ ಪ್ರಶಸ್ತಿ ಪಡೆದ ಅಶ್ವಿನ್ ಪತ್ನಿ, ಪ್ರೀತಿ ಅಶ್ವಿನ್ ಹೆಣ್ಣು ಮಗುವಿಗೆ ಡಿ.21ರಂದು ಜನ್ಮ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನ್ ಪತ್ನಿ, ಸಾರ್ವಜನಿಕರಿಂದ ಮಗು ಹುಟ್ಟಿರುವ ಮಾಹಿತಿ ದೂರವಿಡುವುದಕ್ಕೆ ಕಾರಣವಿದೆ. ಈ ಬಾರಿ ಐಸಿಸಿಯಿಂದ ವಾರ್ಷಿಕ ಪ್ರಶಸ್ತಿ ಪಡೆದುಕೊಂಡಿರುವ ಅಶ್ವಿನ್ ಸಂಭ್ರಮಾಚರಣೆಗೆ ಇದು ತೊಡಕಾಗಬಾರದು ಎಂದು ಅವರು ಹೇಳಿದ್ದಾರೆ.