ಬೆಳ್ತಂಗಡಿ: ಇಲ್ಲಿನ ಮಂಜುನಾಥ ಕಲಾ ಭವನದಲ್ಲಿ ಕಳೆದ 5 ದಿನಗಳಿಂದ ಬಾರ್ ಅಸೋಸಿಯೇಶನ್ ಬೆಳ್ತಂಗಡಿ ಹಾಗೂ ರೋಟರಿ ಕ್ಲಬ್, ಬೆಳ್ತಂಗಡಿಯವರು ನಡೆಸುತ್ತಿರುವ ರೋಟೋ ಲಾಯರ್ಸ ಕಪ್ ಇಂಟರ್ ನ್ಯಾಶನಲ್ ಚೆಸ್ ಪಂದ್ಯಾಟದಲ್ಲಿ ಬುಧವಾರ ಇಂಟರ್ ನ್ಯಾಶನಲ್ ಮಾಸ್ಟರ್ ಗಿರೀಶ್ ಕೌಶಿಕ್ ಅವರು ಕೊನೆಯ ಸುತ್ತಿನಲ್ಲಿ ಆದಿತ್ಯ ಬಿ ಕಲ್ಯಾಣಿ ಅವರನ್ನು ಎದುರಿಸಿ ಜಯವನ್ನು ಗಳಿಸುವುದರೊಂದಿಗೆ ಮುಕ್ತಾಯ ಕಂಡಿತು. ಗಿರೀಶ್ ಅವರು ರೋಟೋ ಲಾಯರ್ಸ್ ಕಪ್ 2016ರ ಚಾಂಪಿಯನ್ ಆಗಿ 1ಲಕ್ಷ ಮೌಲ್ಯದ ಮೊತ್ತವನ್ನು ತಮ್ಮದಾಗಿಸಿಕೊಂಡರು.
ಪಂದ್ಯಾಟದ ಅಗ್ರ ಶ್ರೇಯಾಂಕಿತ ಆಟಗಾರ ಇಂಟರ್ ನ್ಯಾಶನಲ್ ಮಾಸ್ಟರ್ ತಮಿಳುನಾಡಿನ ನಿತಿನ್ ಹಾಗೂ ಗಿರೀಶ್ 8 ಅಂಕಗಳನ್ನು ಪಡೆದುಕೊಂಡರು ಟೈ ಬ್ರೇಕ್ ಆದರದ ಮೇಲೆ ಗಿರೀಶ್ ಚಾಂಪಿಯನ್ ಆಗಿ ಮೂಡಿಬಂದರು. ನಿತಿನ್ ದ್ವಿತೀಯ ಸ್ಥಾನ ಪಡೆದುಕೊಂಡರೆ ತೃತೀಯ ಸ್ಥಾನವನ್ನು ಶಾಬ್ದಿಕ್ ವರ್ಮ ತನ್ನದಾಗಿಸಿಕೊಂಡರು.
2ನೇ ಬೋರ್ಡ್ ನಲ್ಲಿ ಆಡಿದ ಸ್ಥಳೀಯ ಪ್ರತಿಭೆ ಶಾಬ್ದಿಕ್ ವರ್ಮ ಎರಡುವರೆ ಫಂಟೆಗಳ ಕಾಲ ಸೆಣಸಾಡಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಇಂಟರ್ ನ್ಯಾಶನಲ್ ಮಾಸ್ಟರ್ ಡಿ. ವಿ ಪ್ರಸಾದ್ ಜೊತೆ ಅಂಕವನ್ನು ಹಂಚಿಕೊಂಡರು.
ಸಂಸದ ನಳಿನ್ ಕುಮಾರ್ ಕಟೀಲ್ ಬಹುಮಾನಗಳನ್ನು ವಿತರಿಸಿದರು. ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸತೀಶ್ ಎಸ್. ಟಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು, ಅರವಿಂದ ಶಾಸ್ತ್ರಿ ಕಾರ್ಯದರ್ಶಿ ಯು.ಕೆ.ಸಿಯೆ ಬೆಂಗಳೂರು, ರೋ. ಪಿ. ಎಚ್. ಎಫ್, ಸಿ ಸಂತೋಷ್ ಶೆಟ್ಟಿ, ರೋಟರಿ ಅಸಿಸ್ಟೆಂಟ್ ಗವರ್ನರ್, ಎ.ಐ.ಸಿ.ಎಫ್ ಚೆನೈ ಜೊತೆ ಕಾರ್ಯದರ್ಶಿ ಹನುಮಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಕೆ. ಪ್ರತಾಪ ಸಿಂಹ ನಾಯಕ್, ರತ್ನ ವರ್ಮ ಬುಣ್ಣು, ಪ್ರಕಾಶ್ ಫ್ರಭು, ಪತ್ರಕರ್ತ ದೇವಿ ಪ್ರಸಾದ್ ಉಪಸ್ಥಿತರಿದ್ದರು. ಪ್ರಶಸ್ತಿ ವಿಜೇತರ ಪಟ್ಟಿಯನ್ನು ಅಂತರಾಷ್ಟ್ರೀಯ ತೀರ್ಪುಗಾರರಾದ ವಸಂತ ಬಿ.ಎಚ್ ವಾಚಿಸಿದರು. ಶ್ರೀ ಸುಬ್ರಮಣ್ಯ ಕುಮಾರ್ ಅಗರ್ತ ಸ್ವಾಗತಿಸಿ, ಡಿ.ಎಮ್ ಗೌಡ ವಂದಿಸಿದರು. ಬಿ.ಕೆ ಧನಂಜಯ ರಾವ್ ಮತ್ತು ಡಾ. ಜಯಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.