ಟೀಂ ಇಂಡಿಯಾ ಆಲಗ್ ರೌಂಡರ್ ಇರ್ಫಾನ್ ಪಠಾಣ್ ಅವರ ಪತ್ನಿ ಸಫಾಬೇಗ್ ಇತ್ತೀಚೆಗೆ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಈ ವಿಷಯವನ್ನು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ.
ಗಂಡು ಮಗುವಿಗೆ ಜನ್ಮ ನೀಡಿದ ಇರ್ಫಾನ್ ದಂಪತಿಗೆ ಅಭಿಮಾನಿಗಳು, ಹಿತೈಷಿಗಳು ಶುಭ ಕೋರಿದ್ದು, ಈ ಸಂದರ್ಭ ದಿವ್ಯಾನ್ಷು ಎನ್ನುವವರು ಇರ್ಫಾನ್ ಗೆ ಮಗ ಹುಟ್ಟಿದ್ದಕ್ಕೆ ಕಂಗ್ರಾಟ್ಸ್ ಹೇಳಿ ‘ಮಗನಿಗೆ ದಾವೂದ್, ಯಾಕೂಬ್ ಹೆಸರಿಡಬೇಡಿ ಹಾಸ್ಯಾಸ್ಪದವಾಗಿರುತ್ತೆ’ ಎಂದು ಗೇಲಿಮಾಡಿದ್ದಾರೆ.
ದಿವ್ಯಾನ್ಷು ಅವರ ಹೇಳಿಕೆಗೆ ಪಠಾಣ್, ‘ದಿವ್ಯಾನ್ಷು ಅವರೇ ಹೆಸರು ಏನೇ ಇರಲಿ, ಒಂದು ಮಾತು ಮಾತ್ರ ನಿಜ. ನನ್ನ ಮಗ ಅಪ್ಪ, ದೊಡ್ಡಪ್ಪನಂತೆ ದೇಶಕ್ಕೆ ಒಳ್ಳೆಯ ಹೆಸರು ತರುತ್ತಾನೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಮಗನಿಗೆ ಇಮ್ರಾನ್ಖಾನ್ ಪಠಾಣ್ ಅಂತಾ ಹೆಸರಿಟ್ಟಿರುವುದಾಗಿ ಇದೇ ವೇಳೆ, ಇರ್ಫಾನ್ ಪಠಾಣ್ ಹೇಳಿದ್ದಾರೆ.