ಹೊಸದಿಲ್ಲಿ: ಡಬ್ಲ್ಯುಡಬ್ಲ್ಯುಇ (ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ವೆುಂಟ್) ಗೆ ಭಾರತದ ಕುಸ್ತಿಪಟು ಮತ್ತು ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಮುಂದಿನ ವರ್ಷ ಎಂಟ್ರಿ ಕೊಡಲಿದ್ದಾರೆ.
ಡಬ್ಲ್ಯುಡಬ್ಲ್ಯುಇ ಲೀಗ್ 2017ರ ನವೆಂಬರ್ ನಲ್ಲಿ ನಡೆಯಲಿದ್ದು, ಮನರಂಜನೆಯನ್ನು ಆದ್ಯತೆಯಾಗಿರಿಸಿಕೊಂಡಿರುವ ಈ ಗೇಮ್ ನಲ್ಲಿ ಭಾರತದ ದಿ ಗ್ರೇಟ್ ಖಲಿಯಂತೆ 33 ವರ್ಷದ ಸುಶೀಲ್ ಡಬ್ಲ್ಯುಡಬ್ಲ್ಯುಇಗೆ ಪಾದಾರ್ಪಣೆ ಮಾಡಲಿದ್ದಾರೆ.
ಈ ವರ್ಷದ ಒಲಿಂಪಿಕ್ಸ್ ವೇಳೆ ತಮ್ಮ ವಿಭಾಗದಲ್ಲಿ ಸುಶೀಲ್ ಗೆ ಸ್ಪರ್ಧಿಸಲು ಆಗಲಿಲ್ಲ. 2012 ಲಂಡನ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ, 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಪದಕವನ್ನು ಸುಶೀಲ್ ತಮ್ಮದಾಗಿಸಿಕೊಂಡಿದ್ದರು.