ಮ್ಯಾಡ್ರಿಡ್: ರಿಯಲ್ ಮ್ಯಾಡ್ರಿಡ್ ಕ್ಲಬ್ ನ ಸ್ಟಾರ್ ಸ್ಟೈಕರ್ ಪೋರ್ಚುಗಲ್ ಕ್ರಿಶ್ಚಿಯಾನೊ ರೊನಾಲ್ಡೊ ಅವರು ಚೀನಾದ ಸೂಪರ್ ಲೀಗ್ ನ ಕ್ಲಬ್ ತಂಡದಿಂದ ಬಂದಿದ್ದ 2.158 ಕೋಟಿ ರುಪಾಯಿ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ.
ರೊನಾಲ್ಡೊ ಏಜೆಂಟ್ ಜಾರ್ಜ್ ಮೆಂಡಿಸ್ ಸ್ವತಃ ಈ ಬಗ್ಗೆ ಹೇಳಿದ್ದು, ರೊನಾಲ್ಡೊ ಅವರನ್ನು ಚೀನಾದ ಫುಟ್ಬಾಲ್ ಕ್ಲಬ್ ತನ್ನ ತಂಡಕ್ಕೆ ಸೇರಿಸಿಕೊಳ್ಳುವ ಉತ್ಸುಕದಲ್ಲಿತ್ತು. ಆದರೆ ರಿಯಲ್ ಮ್ಯಾಡ್ರಿಡ್ ಕ್ಲಬ್ ಜತೆ ನನ್ನ ಜೀವವಿದೆ. ತಾವು ಈ ಕ್ಲಬ್ ನಲ್ಲಿ ಸಂತೋಷದಿಂದ ಇರುವುದಾಗಿ, ಹಣವೇ ಎಲ್ಲವೂ ಅಲ್ಲ ಎಂದು ರೊನಾಲ್ಡೊ ಈ ಆಫರ್ ಅನ್ನು ನಿರಾಕರಿಸಿದ್ದಾರೆ ಎಂದು ಜಾರ್ಜ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.