ಮುಂಬಯಿ: ಹಿರಿಯ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಅವರು ಮುಂದಿನ ಬಿಸಿಸಿಐ ಅಧ್ಯಕ್ಷರಾಗಲು ಸೌರವ್ ಗಂಗೂಲಿ ಯೋಗ್ಯ ಅಭ್ಯರ್ಥಿ ಎಂದು ಹೇಳಿದ್ದಾರೆ.
ಭಾರತೀಯ ಕ್ರಿಕೆಟನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಉತ್ತಮವಾಗಿ ನಡೆಸಿದ ಕೀರ್ತಿ ಗಂಗೂಲಿ ಅವರಿಗಿದ್ದು, ಭಾರತೀಯ ಕ್ರಿಕೆಟ್ 1999-2000 ಇಸವಿಯ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್ನಲ್ಲಿ ಸಿಲುಕಿದ್ದ ಸಮಯ ಗಂಗೂಲಿಗೆ ಟೀಂ ಇಂಡಿಯಾದ ನಾಯಕತ್ವ ನೀಡಲಾಗಿದ್ದು, ಅದನ್ನು ಸಮರ್ಥವಾಗಿ ಮತ್ತು ಯಶಸ್ವಿಯಗಿ ಗಂಗೂಲಿ ನಿಭಾಯಿಸಿದರು. ಕ್ರಿಕೆಟ್ ರಂಗದಲ್ಲಿ ದೊಡ್ಡ ಪಾತ್ರ ವಹಿಸುವ ಶಕ್ತಿ ಸಾಮರ್ಥ್ಯ ಬಿಸಿಸಿಐಗೆ ಇದ್ದು, ಬಿಸಿಸಿಐ ನ ಹೊಸ ಅಧ್ಯಕ್ಷ ಸ್ಥಾನಕ್ಕೆ ಕ್ರಿಕೆಟಿಗ ಸೌರವ್ ಗಂಗೂಲಿ ಸೂಕ್ತವಾದ ಅಭ್ಯರ್ಥಿ ಎಂದು ಗವಾಸ್ಕರ್ ಹೇಳಿದ್ದಾರೆ.