ಮೂಡುಬಿದಿರೆ: ಬಾಳೆಹೊನ್ನೂರಿನಲ್ಲಿ ನಡೆದ 22ನೇಯ ರಾಜ್ಯಮಟ್ಟದ ಟಿ-20 ಬಾಳೆ ಹೊನ್ನೂರು ಕೆ.ಎಸ್.ಎ ಕಪ್ ಪಂದ್ಯಾಟದಲ್ಲಿ ಆಳ್ವಾಸ್ ತಂಡ ಗೆಲುವು ಸಾಧಿಸಿದೆ.
ಫೈನಲ್ ಪಂದ್ಯಾಟದಲ್ಲಿ ಬೆಂಗಳೂರಿನ ಸುನಿಲ್ ಇಲೆವೆನ್ ತಂಡವನ್ನು ಸೋಲಿಸಿ 4ನೇ ಬಾರಿಗೆ ಕೆ.ಎಸ್.ಎ ಕಪ್ ಅನ್ನು ತನ್ನದಾಗಿಸಿದೆ. 2 ಇನ್ನಿಂಗ್ಸ್ ನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಳ್ವಾಸ್ ತಂಡ 20 ಓವರಿಗೆ 178 ರನ್ ಗಳನ್ನು ಕಲೆಹಾಕಿತು. ಇದಕ್ಕೆ ಉತ್ತರವಾಗಿ ಸುನಿಲ್ ತಂಡ 20 ಓವರಿನಲ್ಲಿ 140 ರನ್ ಪೇರಿಸಿತು. ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಳ್ವಾಸ್ ತಂಡ 164 ರನ್ ಗಳನ್ನು ಗಳಿಸಿ ಸುನಿಲ್ ತಂಡಕ್ಕೆ 203 ರನ್ನ ಗುರಿಯನ್ನು ನೀಡಿತು ಇದಕ್ಕೆ ಉತ್ತರವಾಗಿ ಸುನಿಲ್ ತಂಡ 160 ಕಲೆಹಾಕಿತು. ಆಳ್ವಾಸ್ ನ ರಕ್ಷಿತ್ ಉತ್ತಮ ಬ್ಯಾಟ್ಸ್ ಮನ್ ಹಾಗೂ ಆಳ್ವಾಸ್ ನ ಕೆ.ಎಸ್. ದೇವಯ್ಯ ಉತ್ತಮ ಬೌಲರ್ ಪ್ರಶಸ್ತಿಯನ್ನು ತನ್ನದಾಗಿಸಿತು.