ಮೂಡುಬಿದಿರೆ: ಜಮಖಂಡಿ ತಾಲೂಕಿನ ಕವಟಗಿಯಲ್ಲಿ ಬಾಗಲಕೋಟೆ ಜಿಲ್ಲಾ ಯುವಜನ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ ನಡೆದ ಅಂತರಾಜ್ಯ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ಚಾಂಪಿಯನ್ಶಿಪ್ ಪ್ರಶಸ್ತಿ ಪಡೆದಿದೆ.
ಸೆಮಿ ಫೈನಲ್ ನಲ್ಲಿ ಆಳ್ವಾಸ್ ತಂಡವು ಮಾತಾ ಬೆಂಗಳೂರು ತಂಡವನ್ನು ಹಾಗೂ ಬೆಂಗಳೂರು ಸಿಟಿ ತಂಡವು ಧರ್ಮವೀರ ಪುಣೆ ತಂಡವನ್ನು ಸೋಲಿಸಿ ಫೈನಲ್ಗೇರಿತು. ಫೈನಲ್ ನಲ್ಲಿ ಆಳ್ವಾಸ್ ತಂಡವು ಬೆಂಗಳೂರು ಸಿಟಿ ತಂಡವನ್ನು ಸೋಲಿಸಿತು. ಆಳ್ವಾಸ್ ನ ಸೌಮ್ಯ ಉತ್ತಮ ದಾಳಿಗಾರ್ತಿ ಪ್ರಶಸ್ತಿಯನ್ನು ಪಡೆದರು.