ಹರಿಯಾಣ: ಲಂಡನ್ ಒಲಿಂಪಿಕ್ಸ್ ಕಂಚು ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ವದುವಿನ ಕಡೆಯಿಂದ ಮದುವೆಗಾಗಿ 1 ರುಪಾಯಿ ವರದಕ್ಷಿಣೆ ಪಡೆದಿದ್ದು, ಇದೀಗ 10 ಕೋಟಿ ರೂ.ಗಳನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಯೋಗೇಶ್ವರ್ ಊರಿನ ಅಭಿವೃದ್ದಿಗೆ ನೀಡಿದ್ದಾರೆ.
ಯೋಗೇಶ್ವರ್ ದತ್ ವಿವಾಹ ಸಮಾರಂಭ ಸೋಮವಾರ ಸೋನಿಪತ್ ನಲ್ಲಿ ನಡೆದಿದ್ದು ಈ ಸಂದರ್ಭ ಮದುವೆಗೆ ಆಗಮಿಸಿದ್ದ ಸಂದರ್ಭ ಸ್ಥಳೀಯರೊಬ್ಬರು ತಮ್ಮ ಊರಿನ ಅಭಿವೃದ್ಧಿಗೆ ನೆರವು ನೀಡುವಂತೆ ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಮನೋಹರ್ ಲಾಲ್ ಖಟ್ಟರ್ ಊರಿಗೆ ಕುಡಿಯುವ ನೀರಿನ ಸರಬರಾಜು, ಕಾಂಕ್ರೀಟ್ ರಸ್ತೆ ಅಭಿವೃದ್ಧಿಗೆ ಬಳಕೆಗೋಸ್ಕರ 10 ಕೋಟಿ ರೂ.ಗಳನ್ನು ಘೋಷಣೆ ಮಾಡಿದ್ದಾರೆ.