ಧರ್ಮಶಾಲಾ: ಅನುರಾಗ್ ಠಾಕೂರ್ ಅವರು ಬಿಸಿಸಿಐಯ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿದ್ದು, ಹಳೆಯ ಸಂಗತಿ ಇದೀಗ ಅವರು ಹಿಮಾಚಲ ಪ್ರದೇಶ ಒಲಿಂಪಿಕ್ ಸಂಸ್ಥೆಯ(ಎಚ್ ಪಿ ಒಎ) ಹೊಸ ಅಧ್ಯಕ್ಷರಾಗಿ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಿ ಬಿಸಿಸಿಐ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳದ ಹಿನ್ನೆಲೆ ಮತ್ತು ಲೋಧಾ ಸಮಿತಿ ಶಿಫಾರಸು ಪಾಲನೆ ಮಾಡದಿರುವುದಕ್ಕೆ ಠಾಕೂರ್ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿತ್ತು.
ವೀರೇಂದ್ರ ಕನ್ನವರ್ ಹಿರಿಯ ಉಪಾಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಬಾಂಕ್ಸಿಂಗ್ ಒಕ್ಕೂಟದ ಉಪಾಧ್ಯಕ್ಷ ರಾಜೇಶ್ ಭಂಡಾರಿಯಾ ಹಾಗೂ ಎಚ್ ಪಿ ಒಎ ಅಧ್ಯಕ್ಷರಾಗಿ ಠಾಕೂರ್ ನಾಲ್ಕು ವರ್ಷದ ಅವಧಿಗೆ ಆಯ್ಕೆಯಾಗಿದ್ದಾರೆ.