ಮೂಡುಬಿದಿರೆ: ಉಡುಪಿ ಜಿಲ್ಲೆಯ ಅಜ್ಜರ್ ಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಗೇಲ್ ಇಂಡಿಯಾ ಗ್ರಾಮೀಣ ಅಥ್ಲೆಟಿಕ್ಸ್ ಕ್ರೀಡಾಕೂಟ ಆಳ್ವಾಸ್ ಪ್ರೌಢಶಾಲೆಯ ಕ್ರೀಡಾಪಟುಗಳು 7 ಚಿನ್ನ, 8 ಬೆಳ್ಳಿ ಹಾಗೂ 01 ಕಂಚಿನ ಪದಕಗಳನ್ನು ಪಡೆದು ಒಟ್ಟು 16 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದು, 6 ಮಂದಿ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17 ವರ್ಷ ವಯೋಮಿತಿಯಲ್ಲಿ ಅಂಕಿತಾ ಎಂ.ಎಸ್ ಉದ್ದಜಿಗಿತ ಪ್ರಥಮ, ಜೋತ್ಸ್ನಾ100 ಮೀ ದ್ವಿತೀಯ, 4*100ಮೀ ರಿಲೇ ದ್ವಿತೀಯ, ಕಾವ್ಯ ಎಚ್.ಆರ್ ಗುಂಡು ಎಸೆತ ದ್ವಿತೀಯ, ಐಶ್ವರ್ಯ 4*100ಮೀ ರಿಲೇ ದ್ವಿತೀಯ , ಶ್ರೀದೇವಿಕಾ 4*100ಮೀ ರಿಲೇ ದ್ವಿತೀಯ, ಧನ್ಯಶ್ರೀ 4*100ಮೀ ರಿಲೇ ದ್ವಿತೀಯ, ನಾಗೇಂದ್ರ ಅಣ್ಣಪ್ಪ ಗುಂಡು ಎಸೆತ ದ್ವಿತೀಯ. ರಿನ್ಸ್ ಜೋಸೆಫ್ 400ಮೀ ದ್ವಿತೀಯ.
14 ವರ್ಷದ ವಯೋಮಿತಿಯಲ್ಲಿ ರಾಜ್ ಸೋಪಾನದತ್ತ 400ಮೀ ಪ್ರಥಮ, 100 ಮೀ ದ್ವಿತೀಯ, ಚೈತ್ರಶ್ರೀ 4ಥ100ಮೀ ರಿಲೇ ಪ್ರಥಮ, ದೀಪಾಶ್ರೀ 4*100ಮೀ ರಿಲೇ ಪ್ರಥಮ, ಯಾಶ್ಮೀನಾ 4ಥ100ಮೀ ರಿಲೇ ಪ್ರಥಮ, ಗುಣಶ್ರೀ 4ಥ100ಮೀ ರಿಲೇ ಪ್ರಥಮ, ಸ್ನೇಹಾ ಉದ್ದಜಿಗಿತ ಪ್ರಥಮ ಸ್ಥಾನದೊಂದಿಗೆ ಪದಕವನ್ನು ಗಳಿಸಿದ್ದಾರೆ.