News Kannada
Thursday, December 08 2022

ಕ್ರೀಡೆ

ಗುಡ್ಡಗಾಡು ಓಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು

Photo Credit :

ಗುಡ್ಡಗಾಡು ಓಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು

ಮಡಿಕೇರಿ: ಕೂಡಿಗೆಯ ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳು ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಪಾಲ್ಗೊಂಡು ಗಮನಾರ್ಹ ಸಾಧನೆ ಮಾಡಿದ್ದಾರೆ.

ವಿಭಾಗ ಎ, ಬಿ, ಸಿ ಮತ್ತು ಡಿ ಎಂಬ ನಾಲ್ಕು ವಿಭಾಗದಲ್ಲಿ ನಡೆದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ  ಎ ವಿಭಾಗದಲ್ಲಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಗಳು, ಬಿ ವಿಭಾಗದಲ್ಲಿ 10 ಮತ್ತು 11ನೇ ತರಗತಿ ವಿದ್ಯಾರ್ಥಿಗಳು, ಸಿ ವಿಭಾಗದಲ್ಲಿ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ಡಿ ವಿಭಾಗದಲ್ಲಿ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇನ್ನು ಓಟದ ಸ್ಪರ್ಧೆಗೆ ಹಿರಿಯ ವಿಭಾಗದ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರಾದ ಕ್ಯಾಪ್ಟನ್ ಬೆನ್ ಹೆಚ್ ಬೆರ್ಸನ್ರವರು ಧ್ವಜ ಸಂಕೇತವನ್ನು ತೋರಿಸುವ ಮೂಲಕ ಚಾಲನೆಯನ್ನು ನೀಡಿದರೆ, ಕಿರಿಯರ ವಿಭಾಗದ ವಿದ್ಯಾರ್ಥಿಗಳಿಗೆ ಶ್ರೀಮತಿ ಪ್ರಿನ್ಸಿ ಬರ್ಸನ್ರವರು ಧ್ವಜ ಸಂಕೇತವನ್ನು ತೋರಿಸುವುದರ ಮೂಲಕ ಚಾಲನೆಯನ್ನು ನೀಡಿದರು.     

ಎ ವಿಭಾಗಕ್ಕೆ 10 ಕಿ ಮೀ,  ಬಿ ವಿಭಾಗಕ್ಕೆ 08 ಕಿ ಮೀ, ಸಿ ವಿಭಾಗಕ್ಕೆ 6 ಕಿ ಮೀ ಮತ್ತು ಡಿ ವಿಭಾಗಕ್ಕೆ 1.5 ಕಿ ಮೀ ದೂರವನ್ನು ನಿಗದಿಪಡಿಸಲಾಗಿತ್ತು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶ್ರೀಮತಿ ಪ್ರಿನ್ಸಿ ಬರ್ಸನ್ರವರು ಬಹುಮಾನ ವಿತರಣೆ ಮಾಡಿದರು. ಶಾಲೆಯ ಮೆನನ್ ನಿಲಯವು ತನ್ನ ಉತ್ತಮ ಸಾಧನೆಗಾಗಿ ಗುಡ್ಡಗಾಡು ಓಟ ಸ್ಪರ್ಧೆ 2016-17ರ ಪಾರಿತೋಷಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆಯಿತು.

See also  ಐಪಿಎಲ್ ಗೆ ಭಯೋತ್ಪಾದಕ ಬೆದರಿಕೆ: ವಾಂಖೆಡೆ ಸ್ಟೇಡಿಯಂ ಸುತ್ತ ಬಿಗಿ ಭದ್ರತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು