ಕೋಲ್ಕತ್ತಾ: ಟೀಂ ಇಂಡಿಯಾ 1993ರ ಹೀರೋ ಕಪ್ ಗೆಲ್ಲಲ್ಲು ಮುಂಗುಸಿಯೇ ಪರೋಕ್ಷ ಕಾರಣವೆಂದು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಹೀರೋ ಕಪ್ ನ ಸೆಮಿಫೈನಲ್ ಪಂದ್ಯ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವಾಗ ಆಫ್ರಿಕಾಗೆ ಗೆಲ್ಲಲು ಕೊನೇ ಓವರ್ ನಲ್ಲಿ 6 ರನ್ ಬೇಕಿತ್ತು. ಈ ಸಂದರ್ಭ ಬೌಲಿಂಗ್ ಮಾಡಿದ ಸಚಿನ್ ಯಾವುದೇ ರನ್ ನೀಡದೆ ಟೀಂ ಇಂಡಿಯಾದ ಗೆಲುವಿಗೆ ಪ್ರಮುಖ ಕಾರಣರಾದರು.
ಮುಂಗುಸಿ ಬಂದಾಗಲೆಲ್ಲಾ ವಿಕೆಟ್ ಉರುಳುತ್ತಿತ್ತು. ಪಂದ್ಯದ 2ನೇ ಅವಧಿಯಾಟದಲ್ಲಿ ಪದೇ ಪದೇ ಮುಂಗುಸಿ ಮೈದಾನಕ್ಕೆ ಬರುತ್ತಿತ್ತು. ಕೊನೇ ಓವರ್ ಎಸೆಯುವುದಕ್ಕೂ ಮೊದಲು ಮುಂಗುಸಿ ಬರಲೆಂದು ಕಾಯುತ್ತಿದ್ದೆ. ಅದರಂತೆ ಮುಂಗುಸಿಯಿಂದ ನಮ್ಮ ಅದೃಷ್ಟ ಬದಲಾಯಿತು ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.