ಮೂಡುಬಿದಿರೆ: ಮೂಡುಬಿದಿರೆಯ ಎಂ.ಕೆ. ಶೆಟ್ಟಿ ಸೆಂಟ್ರಲ್ ಸ್ಕೂಲ್ನ 7ನೇ ತರಗತಿಯ ವಿದ್ಯಾರ್ಥಿ ಪ್ರತ್ಯೂಷ್ ಪಿ. ಭಂಡಾರಿ, ಕುಂದಾಪುರದ ಸಹನಾ ಕನ್ವೆಂಶನ್ ಸೆಂಟರ್ ನಲ್ಲಿ ನಡೆದ 6 ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ `ಪಂಚ್-2016′ ಇದರ 14 ವರ್ಷ ವಯೋಮಿತಿ ಕಟಾ ವಿಭಾಗ ಹಾಗೂ ಕಟಪಾಡಿಯಲ್ಲಿ ನಡೆದ 11ನೇ ರಾಜ್ಯ ಮಟ್ಟದ ಇನ್ವಿಟೇಶನ್ ಕರಾಟೆ ಚಾಂಪಿಯನ್ ಶಿಪ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ ಪಡದಿರುತ್ತಾರೆ.
ಸುಳ್ಯದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ನ 40ಕೆ.ಜಿ. ಕುಮಿಟೆ ವಿಭಾಗದಲ್ಲಿ ಪ್ರತ್ಯೂಷ್, ಬೆಳ್ಳಿಯ ಪದಕ ಪಡೆದಿರುತ್ತಾರೆ. ಈತ ಕರಾಟೆ ಶಿಕ್ಷಕ ನದೀಂ ಮತ್ತು ಸರ್ಫಾರಾಜ್ ರವರ ಶಿಷ್ಯ.