ಬೆಂಗಳೂರು: ವೃತ್ತಿಪರ ಕಿಕ್ ಬಾಕ್ಸರ್, ಪರ್ಸನಲ್ ಟ್ರೈನರ್ ಮತ್ತು ಫೈಟರ್ ಗಿರೀಶ್ ಆರ್. ಗೌಡ ಇತ್ತೀಚೆಗೆ ವಾಕೊ ಇಂಡಿಯಾ ಕೆಡೆಟ್ ಮತ್ತು ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ 2016-17 ಮತ್ತು ಫೆಡರೇಷನ್ ಕಪ್ ಸೀನಿಯರ್ ನ್ಯಾಷನಲ್ ನಲ್ಲಿ ಗಿರೀಶ್ ಗೌಡ 86 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.
ನವದೆಹಲಿಯ ಟಾಲ್ಕಟೋರ್ ಸ್ಟೇಡಿಯಂನಲ್ಲಿ ನಡೆದ ಫೆಡರೇಷನ್ ಕಪ್ ಸೀನಿಯರ್ ನ್ಯಾಷನಲ್ ನಲ್ಲಿ ಗಿರೀಶ್ ಗೌಡ 86 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದು, ಇವರ ಜೊತೆ ಕೆ1 ರೂಲ್ಸ್-ಶತೃಘ್ಞ- 91ಕೆಜಿಯಲ್ಲಿ ಚಿನ್ನದ ಪದಕ, ಸಂಜಿತ್ ರಮೇಶ್- 81 ಕೆಜಿಯಲ್ಲಿ ಬೆಳ್ಳಿ ಪದಕ, ಅಜಿತ್ ಕುಮಾರ್- 76 ಕೆಜಿಯಲ್ಲಿ ಬೆಳ್ಳಿ ಪದಕ, ಇಶಾನ್ ಗೋವರ್ಧನ್- 71 ಕೆಜಿಯಲ್ಲಿ ಕಂಚಿನ ಪದಕ ಮತ್ತು ದಿಲೀಪ್ ಕುಮಾರ್- 71 ಕೆಜಿಯಲ್ಲಿ ಕಂಚಿನ ಪದಕ (ಲೋ ಕಿಕ್ ರೂಲ್ಸ್) ಗಳಿಸಿದ್ದಾರೆ.