ಕೊಚ್ಚಿ: ಅಂಧರ ಟ್ವೆಂಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತವು ಆಸಿಸ್ ತಂಡವನ್ನು ಸೋಲಿಸಿದ್ದು, ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಭಾರತ ಮತ್ತು ಆಸೀಸ್ ನಡುವಿನ ಪಂದ್ಯ ರಾಜಗಿರಿ ಕಾಲೇಜ್ ಮೈದಾನದಲ್ಲಿ ಭಾನುವಾರ ನಡೆದಿದ್ದು, ಸುನಿಲ್ ಮತ್ತು ಮಹಮ್ಮದ್ ಫರ್ಹಾನ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತವು ವಿಕೆಟ್ ನಷ್ಟವಿಲ್ಲದೆ 272 ರನ್ ಗಳಿಸಿತು.
35 ಎಸೆತಗಳಲ್ಲಿ 53 ರನ್ ಗಳಿಸಿ ಫರ್ಹಾನ್ ಗಾಯಗೊಂಡು ನಿವೃತ್ತಿಯಾಗಿದರೆ, ಕರ್ನಾಟಕದ ಸುನಿಲ್ 29 ಬೌಂಡರಿಗಳ ಮೂಲಕ 72 ಎಸೆತಗಳನ್ನು ಎದುರಿಸಿ 163 ರನ್ ಸಿಡಿಸಿದರು.
ಇದಕ್ಕೆ ಪ್ರತಿಯಾಗಿ ಆಸಿಸ್ ಗೆ144 ರನ್ಗಳಿಸಲಷ್ಟೇ ಸಾಧ್ಯವಾಯಿತು. ಅಜಯ್ ಕುಮಾರ್ ರೆಡ್ಡಿ 11 ರನ್ ಗಳನ್ನು ನೀಡಿ 2 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.