ನಂಜನಗೂಡು: ನಂಜನಗೂಡಿನ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಆಶ್ರಯದಲ್ಲಿ ಮೈಸೂರು ಜಿಲ್ಲಾ ಕ.ರ.ವೇ ಅಧ್ಯಕ್ಷ ಪೈ. ಪ್ರವೀಣ್ ಕುಮಾರ್ ರವರ ಹುಟ್ಟು ಹಬ್ಬದ ಅಂಗವಾಗಿ ನಡೆದ ರಾಜ್ಯ ಮಟ್ಟದ 30 ಜೊತೆ ಕಾಟಾ ಕುಸ್ತಿ ಪಂದ್ಯಾವಳಿಯ ಮಾರ್ಫಟ್ ಕುಸ್ತಿಯಲ್ಲಿ ಪುಣೆಯ ಪೈಲ್ವಾನ್ ವಿಷ್ಣುಕೋಸ ಮತ್ತು ದಾವಣಗೆರೆಯ ಪೈಲ್ವಾನ್ ಕಾರ್ತಿಕ್ ಕಾಟೆ ನಡುವೆ ಒಂದು ಘಂಟೆಗಳ ಕಾಲ ಕಾದಾಟ ನಡೆದು ಅಂತಿಮವಾಗಿ ವಿಷ್ಣುಕೋಸರವರು ಗೆಲುವಿನ ನಗೆ ಬೀರುವುದರೊಂದಿಗೆ ನಗದು ಮತ್ತು ಪಾರಿತೋಷಕವನ್ನು ಮುಡಿಗೇರಿಸಿಕೊಂಡರು.
ಇನ್ನುಳಿದಂತೆ ಮೈಸೂರಿನ ಪೈ.ಛೋಟಾ ಫರ್ವೀಜ್ ಮತ್ತು ಪೈ.ಕಿರಣ್ ನಡುವೆ ನಡೆದ ಕುಸ್ತಿಯಲ್ಲಿ ಫರ್ವೇಜ್ ರವರು ಗೆದ್ದರೆ ದಾವಣೆಗೆರೆಯ ಪೈ.ಆನಂದ್ ಮತ್ತು ಬಿಜಾಪುರದ ಪೈ.ರವಿಚಂದ್ರರವರ ನಡುವೆ ನಡೆದ 30 ನಿಮಿಷಗಳ ಗೆಲುವು ಸೋಲಿನ ಪಂದ್ಯದಲ್ಲಿ ಪೈ.ಆನಂದ್ ಗೆಲುವು ಸಾಧಿಸಿ ನಗದು ಮತ್ತು ಪಾರಿತೋಷಕ ಪಡೆದರು.
ಮೈಸೂರಿನ ಕುಂಬಾರ ಕೊಪ್ಪಲಿನ ಪೈ. ಶರತ್, ಪೈ.ಮಾರುತಿಯನ್ನು ಮಣಿಸಿದರು. ನಂಜನಗೂಡು ಪೈ.ರಂಗಸ್ವಾಮಿ, ಪೈ.ದರ್ಶನ್ ಅವರ ವಿರುದ್ದ ಜಯಗಳಿಸಿದರು. ನಂಜನಗೂಡು ಕುರಬಗೇರಿ ಗರಡಿಯ ಪೈ.ಹರ್ಷ, ಗಾಂಧಿನಗರದ ಪೈ. ಯೋಗೀಶ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದರು. ಉಳಿದ ಜೊತೆಗಳು ಸಮದಲ್ಲಿ ಅಂತ್ಯಗೊಂಡವು.