ಹೊಸದಿಲ್ಲಿ: ಲಲಿತಾ ಪಾರ್ಕ್ನಲ್ಲಿ ನಡೆದ ಟ್ವೆಂಟಿ–20 ಪಂದ್ಯದಲ್ಲಿ ಕೇವಲ 72 ಎಸೆತಗ ಳಲ್ಲಿ 300 ರನ್ ಗಳಿಸುವ ಮೂಲಕ ದೆಹಲಿಯ ಯುವ ಕ್ರಿಕೆಟಿಗ ಮೋಹಿತ್ ಅಹ್ಲಾವತ್ ಹೊಸ ದಾಖಲೆ ಬರೆದಿದ್ದಾರೆ.
ರೆಂಡ್ಸ್ ಪ್ರೀಮಿಯರ್ ಲೀಗ್ನಲ್ಲಿ ಮಾವಿ ಇಲೆವೆನ್ ತಂಡದ ಪರ ಮೋಹಿತ್ ಆಡುತ್ತಿದ್ದು ಫ್ರೆಂಡ್ಸ್ ಇಲೆವೆನ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ತ್ರಿಶತಕ ದಾಖಲಿಸಿದ್ದಾರೆ.
ಮಾವಿ ಇಲೆವೆನ್ ತಂಡ 20 ಓವರ್ಗಳಲ್ಲಿ ಒಟ್ಟು 416 ರನ್ ಗಳಿಸಿ 216 ರನ್ಗಳ ಭರ್ಜರಿ ಗೆಲುವು ಸಾಧಿಸಿದ್ದು, 14 ಬೌಂಡರಿಗಳು ಮತ್ತು 39 ಸಿಕ್ಸರ್ಗಳ ಮೂಲಕವೇ 290 ರನ್ ಕಲೆ ಹಾಕಿದ್ದಾರೆ.
21 ವರ್ಷದ ಮೋಹಿತ್ ಹರಿಯಾಣ, ರಾಜಸ್ತಾನ ಮತ್ತು ವಿದರ್ಭ ಎದುರು ತಲಾ ಒಂದು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ದೇಶಿ ಟೂರ್ನಿಗಳಲ್ಲಿ ದೆಹಲಿಯನ್ನು ಪ್ರತಿನಿಧಿಸಿದ್ದಾರೆ.