ಹೈದರಾಬಾದ್: ಸೇವಾ ತೆರಿಗೆ ಇಲಾಖೆಯಿಂದ ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರಿಗೆ ನೋಟೀಸ್ ಜಾರಿಯಾಗಿದೆ.
ಫೆ.6ರಂದು ಸೇವಾ ತೆರಿಗೆ ಇಲಾಖೆಯು ಸೇವಾ ತೆರಿಗೆ ಪಾವತಿಸದಿರುವುದು ಅಥವಾ ವಂಚಿಸಿರುವ ಸಂಬಂಧ ಸಮನ್ಸ್ ಜಾರಿ ಮಾಡಿತ್ತು.
ಸೇವಾ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರು ಖುದ್ದಾಗಿ ಅಥವಾ ಮಾನ್ಯತೆ ಪಡೆದಿರುವ ಏಜೆಂಟರ ಮೂಲಕ ಫೆ.16ರೊಳಗೆ ಇಲಾಖೆಗೆ ಹಾಜರಾಗುವಂತೆ ತಿಳಿಸಿದ್ದಾರೆ.
1994ರ ಹಣಕಾಸು ಕಾಯ್ದೆ ಹಾಗೂ ಕೇಂದ್ರ ತೆರಿಗೆ ಕಾಯ್ದೆ ಅಡಿಯಲ್ಲಿ ಸಮನ್ಸ್ ಜಾರಿಯಾಗಿದ್ದು, ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ನೀಡದಿದ್ದಲ್ಲಿ, ಸೂಕ್ತ ಕಾರಣಗಳಿಲ್ಲದೆ ಇಲಾಖೆಗೆ ಹಾಜರಾಗದಿದ್ದಲ್ಲಿ ಹಾಗೂ ನೊಟೀಸ್ಗೆ ಪ್ರತಿಕ್ರಿಯಿಸದೆ ಇದ್ದಲ್ಲಿ ಐಪಿಸಿ ಸೆಕ್ಷನ್ ಅನ್ವಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ.