ಹೊಸದಿಲ್ಲಿ: ಬ್ರಾಂಡ್ ಮೌಲ್ಯದಲ್ಲಿ ಬಾಲಿವುಡ್ ನಟ ಕಿಂಗ್ ಖಾನ್ ಶಾರುಖ್ ಖಾನ್ ರನ್ನು ವಿಶ್ವ ಕ್ರಿಕೆಟ್ ನಲ್ಲಿ ರನ್ ಹೊಳೆಯನ್ನೇ ಹರಿಸುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಿಂದಿಕ್ಕುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಇದೀಗ ಶೇ.20 ರಿಂದ 25ರಷ್ಟು ಕೊಹ್ಲಿಯ ಬ್ರಾಂಡ್ ಮೌಲ್ಯ ಏರಿದ್ದು, ಶಾರುಖ್ ಖಾನ್ ಬ್ರಾಂಡ್ ಮೌಲ್ಯ ಕಳೆದ ವರ್ಷ 800 ಕೋಟಿ ರುಪಾಯಿ ಆದರೆ ಕೊಹ್ಲಿ ಬ್ರಾಂಡ್ ಮೌಲ್ಯ 600 ಕೋಟಿ ರುಪಾಯಿ ಆಗಿತ್ತು. ಈ ಎಲ್ಲಾ ವಿಷಯಗಳನ್ನು ಗಮನಿಸುವಾಗ ಮುಂಬರುವ ದಿನಗಳಲ್ಲಿ ವಿರಾಟ್ ಬ್ರಾಂಡ್ ಮೌಲ್ಯದಲ್ಲಿ ಶಾರುಖ್ ರನ್ನು ಹಿಂದಿಕ್ಕುವ ಸೂಚನೆ ಕಂಡುಬರುತ್ತಿದೆ.
ಇದೀಗ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ವಿರಾಟ್ ಕೊಹ್ಲಿ ಕ್ರಿಕೆಟ್ ನ ಎಲ್ಲಾ ಮಾದರಿಯಲ್ಲೂ ಭರ್ಜರಿ ಫಾರ್ಮ್ ನಲ್ಲಿದ್ದು, ಕೊಹ್ಲಿಯವರ ಬ್ರಾಂಡ್ ಮೌಲ್ಯ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.