News Kannada
Thursday, December 08 2022

ಕ್ರೀಡೆ

ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಗೆ

Photo Credit :

ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ ಗೆ

ಮೂಡುಬಿದಿರೆ: ಎಂ.ಕೆ. ಅನಂತರಾಜ್ ಸಂಸ್ಮರಣ 62ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮೈದಾನದಲ್ಲಿ ನಡೆಯುತ್ತಿದ್ದು, ಪಂದ್ಯಾಟದ ಮೊದಲ ದಿನ ಕರ್ನಾಟಕದ ಮಹಿಳಾ ತಂಡವು ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದೆ. ಪುರುಷರ ತಂಡವು ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ.

ಮಹಿಳಾ ವಿಭಾಗದಲ್ಲಿ ಕರ್ನಾಟಕ ತಂಡವು ದೆಹಲಿ ತಂಡವನ್ನು 35-05, 35-15 ನೇರ ಸೆಟ್ ಗಳಿಂದ ಸೋಲಿಸಿದೆ. ಇನ್ನೊಂದು ಪಂದ್ಯದಲ್ಲಿ ಛತೀಸ್ಗಡ್ ತಂಡವನ್ನು ಕರ್ನಾಟಕ ಮಹಿಳಾ ತಂಡವು 35-20, 35-19 ನೇರ ಸೆಟ್ ಗಳಲ್ಲಿ ಸೋಲಿಸಿ, ಮುಂದಿನ ಹಂತಕ್ಕೆ ಆಯ್ಕೆಯಾಗಿದೆ. ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡವು 31-35, 35-28,35-32 ಅಂಕಗಳೊಂದಿಗೆ ಆಂದ್ರ ಪ್ರದೇಶ ತಂಡವನ್ನು ಸೋಲಿಸಿದೆ. ಕಳೆದ ಬಾರಿಯ ರನ್ನರ್ಸ್ ಅಪ್ ತಂಡ ತೆಲಂಗಾಣದ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅತಿಥೇಯ ಕರ್ನಾಟಕ ಪುರಷರ ತಂಡವು ಸೋಲನ್ನು ಅನುಭವಿಸಿದೆ. ಸೋಮವಾರ ಕರ್ನಾಟಕ ಪುರುಷರ ತಂಡವು ಪುದುಚೆರಿ ತಂಡವನ್ನು ಎದುರಿಸಲಿದೆ. ಮೊದಲ ದಿನ ಪುರಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನಾಡಿದ್ದು, ಮೂರರಲ್ಲಿ ಜಯಗಳಿಸಿದೆ.

ಕಳೆದ ಬಾರಿಯ ಚಾಂಪಿಯನ್ ತಂಡಗಳ ಇಂಡಿಯನ್ ರೈಲ್ವೇಸ್ ಹಾಗೂ ತೆಲಂಗಾಣ ತಂಡಗಳು ಮೊದಲ ದಿನ ತಾವಾಡಿದ ಎರಡೂ ಪಂದ್ಯಗಳನ್ನು ಗೆದ್ದು ಸ್ಪಷ್ಟ ಮುನ್ನಡೆ ಸಾಧಿಸಿದೆ. ಪುರಷರ ವಿಭಾಗದಲ್ಲಿ ತಮಿಳುನಾಡು, ಮೇಜರ್ ಫೋರ್ಟ್ಸ್, ವೇಸ್ಟ್ ಬೆಂಗಾಲ್, ಗುಜರಾತ್, ಛತೀಸ್ಗಡ್, ಚಂಡಿಗಢ್, ಬಿಹಾರ್, ಎಐಯು, ಒಡಿಸ್ಸಾ, ಕೇರಳ, ಒಡಿಸ್ಸಾ, ಡಿಎಇ, ಅಂದ್ರಪ್ರದೇಶ ತಂಡಗಳು ಹಾಗೂ ಮಹಿಳೆಯರ ವಿಭಾಗದಲ್ಲಿ ತಮಿಳುನಾಡು, ಛತೀಸ್ಗಡ್, ಕೇರಳ, ತೆಲಂಗಾಣ, ಒಡಿಸ್ಸಾ, ಬಿಹಾರ್, ಪುದುಚೆರಿ, ಎಐಯು, ಎನ್ಸಿಆರ್, ಗುಜರಾತ್, ರಾಜಸ್ಥಾನ್, ಆಂದ್ರ ಪ್ರದೇಶ, ಕೇರಳ ತಂಡಗಳು ಗೆಲುವು ಸಾಧಿಸಿವೆ.

See also  ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಮಗಳ ಫೋಟೊ ವೈರಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು