ಪುಣೆ: ಭಾರತ ತಂಡ 107 ರನ್ಗಳಿಗೆ ಆಲೌಟಾಗುವ ಮೂಲಕ 333 ರನ್ಗಳಿಂದ ಹೀನಾಯವಾಗಿ ಸೋಲನುಭವಿಸಿದ್ದು, ಆಸ್ಟ್ರೇಲಿಯಾ ನೀಡಿದ್ದ 441 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ ಸ್ಟಿವ್ ಓಕೀಫ್ (35 ಕ್ಕೆ 6) ಮತ್ತು ನಾಥನ್ ಲಯನ್ (53 ಕ್ಕೆ 4) ಬೌಲಿಂಗ್ ದಾಳಿಗೆ ಸಿಲುಕಿ ತತ್ತರಿಸಿದ್ದು, ಈ ಮೂಲಕ ನಾಲ್ಕು ಪಂದ್ಯಗಳ ಸರಣಿಯಲ್ಲಿ 0-1 ಅಂತರದಿಂದ ಭಾರತಕ್ಕೆ ಹಿನ್ನಡೆಯಾಗಿದೆ.
ಭಾರತದ ಪರ ಚೇತೇಶ್ವರ್ ಪೂಜಾರ (31) ರಹಾನೆ (18), ಕೊಹ್ಲಿ (13) ಮತ್ತು ರಾಹುಲ್ (10) ಮಾತ್ರ ಎರಡಂಕಿ ಮೊತ್ತ ಗಳಿಸಲು ಸಫಲರಾಗಿದ್ದು, ಇನ್ನುಳಿದ ಬ್ಯಾಟ್ಸ್ಮನ್ ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲೇ ಇಲ್ಲ. ಸ್ಪಿನ್ನರ್ಗಳಿಗೆ ನೆರವು ನೀಡುತ್ತಿದ್ದ ಪಿಚ್ನಲ್ಲಿ ಆಸ್ಟ್ರೇಲಿಯಾದ ಬೌಲರ್ಗಳ ಅದ್ಭುತ ಬೌಲಿಂಗ್ ದಾಳಿಯಿಂದ ಭಾರತೀಯ ಬ್ಯಾಟ್ಸ್ಮನ್ ಗಳು ಕ್ರೀಸ್ನಲ್ಲಿ ಜಾಸ್ತಿ ಹೊತ್ತು ನಿಲ್ಲದಂತೆ ತೆರದರು.
ಸ್ಕೋರ್:
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 260 ಕ್ಕೆ ಆಲೌಟ್
ಭಾರತ ಮೊದಲ ಇನಿಂಗ್ಸ್ 105 ಕ್ಕೆ ಆಲೌಟ್
ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್ 87 ಓವರ್ಗಳಲ್ಲಿ 285 ಕ್ಕೆ ಆಲೌಟ್ (ಸ್ಮಿತ್ 109, ರೆನ್ಶಾ 31, ಮಾರ್ಷ್ 31, ಅಶ್ವಿನ್ 119 ಕ್ಕೆ 4, ಜಡೇಜಾ 65 ಕ್ಕೆ 3)
ಭಾರತ ಎರಡನೇ ಇನಿಂಗ್ಸ್ 33.5 ಓವರ್ಗಳಲ್ಲಿ 107 ಕ್ಕೆ ಆಲೌಟ್ (ಪೂಜಾರ 31, ರಹಾನೆ 18, ಓಕೀಫ್ 35 ಕ್ಕೆ 6, ಲಯನ್ 53 ಕ್ಕೆ 4)