ಮಡಿಕೇರಿ: ಬೆಂಗಳೂರಿನ ಅಂಬೇಡ್ಕರ್ ಟೆಕ್ವಾಂಡೊ ಕೇಂದ್ರದ ವತಿಯಿಂದ ಇತ್ತೀಚೆಗೆ ನಡೆದ 6ನೇ ಕಾರ್ಮೆಲ್ ಕಪ್ ಟೆಕ್ವಾಂಡೊ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ ವಿದ್ಯಾರ್ಥಿಗಳು ಅತ್ಯಪೂರ್ವ ಸಾಧನೆ ಮೆರೆದಿದ್ದಾರೆ.ಕಾರ್ಮೆಲ್ ಹೈಸ್ಕೂಲಿನ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಟೆಕ್ವಾಂಡೊ ಛಾಂಪಿಯನ್ ಶಿಪ್ ನಲ್ಲಿ 500ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿದ್ದ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ 21 ವಿದ್ಯಾರ್ಥಿಗಳು 12 ಚಿನ್ನ, 9 ಬೆಳ್ಳಿ ಹಾಗೂ 10 ಕಂಚು ಸೇರಿ ಒಟ್ಟು 31 ಪದಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ಆಗ್ನೇಶ್ 2 ಚಿನ್ನ, 1 ಬೆಳ್ಳಿ, ಎಂ. ವಿಹಾನ್ ನಿರಂಜನ್ 2 ಚಿನ್ನ, ಬೈಲೆರಾ ಪ್ರೊನಿಕ್ಷಾ ವಿಶ್ವನಾಥ್ 2 ಚಿನ್ನ, ಕೋಚನ ರುಚಿ ಅರುಣ್1 ಚಿನ್ನ, 2 ಬೆಳ್ಳಿ, ಅಂಗೀರ ವರುಣ್ ಗಣಪತಿ 1 ಚಿನ್ನ,1 ಬೆಳ್ಳಿ, ತಾನಿಯಾ ಭವಾನಿಶಂಕರ1 ಚಿನ್ನ, ತುಳುನಾಡಂಡ ಟಿ. ಉತ್ತಪ್ಪ ಅರುಣ್1 ಚಿನ್ನ, 1 ಬೆಳ್ಳಿ, ಮಿನ್ನಂಡ ಯಶಸ್1 ಚಿನ್ನ, ಎಂ. ಜೀವನ್1 ಚಿನ್ನ, ಬಿಟ್ಟೀರ ಎ. ಪವಿನ್ ಚಂಗಪ್ಪ2 ಬೆಳ್ಳಿ, ಎಂ.ಸಿ. ರಾಹುಲ್ 1 ಬೆಳ್ಳಿ, ನಿರ್ಜಲ್ಲಿ ಬಿ. ಮೋಕ್ಷಿತ್1 ಬೆಳ್ಳಿ, ಬೈಲೆರಾ ಚವಿಕ್ಷಾ ವಿಶ್ವನಾಥ್ 2 ಕಂಚು, ದೃತಿ ಹೃಷಿಕಾ ಬಿ. ಶಂಕರ್1 ಕಂಚು, ಐಚಂಡ ಎಂ. ತನೀಶ್ ತಮ್ಮಯ್ಯ 1 ಕಂಚು, ಚಕ್ಕೇರ ಪಿ. ಕಾರ್ಯಪ್ಪ1 ಕಂಚು, ಪೂರ್ವಿತ್ ವೆಂಕಪ್ಪ 1 ಕಂಚು, ಪೂಜಾರಿರ ಬೃಹತ್ ಬೋಪಯ್ಯ1 ಕಂಚು, ಜಿ.ಜಿ. ಪ್ರೀತಮ್ 1 ಕಂಚು, ಎಂ.ಸಿ. ನಿತ್ಯ 1ಕಂಚು, ಕೃಷ್ಣಪಾಂಡಿ 1 ಕಂಚಿನ ಪದಕ ಪಡೆದುಕೊಂಡಿದ್ದಾರೆ.