ಮಂಗಳೂರು: ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು ವಲಯ ಜೈನ್ ಮಿಲನ್ ರವರ ಆಶ್ರಯದಲ್ಲಿ ಹೊನಲು ಬೆಳಕಿನ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ನಡೆಯಿತು.
ದಾವಣಗೆರೆ ಸೇರಿದಂತೆ ರಾಜ್ಯದ ಒಟ್ಟು 30 ಜೈನ್ ಮಿಲನ್ ತಂಡಗಳ ಭಾಗವಹಿಸುವಿಕೆಯೊಂದಿಗೆ ಯಶಸ್ವಿಯಾಗಿ ಜರುಗಿತು. ಧರ್ಮಸ್ಥಳದ ಸುರೇಂದ್ರ ಕುಮಾರ್ ಹೆಗ್ಗಡೆ, ಉದ್ಯಮಿ ಪುಷ್ಪರಾಜ್ ಜೈನ್ , ಶ್ರೇಯಾಸ್ ಡಿ.ಧರ್ಮಸ್ಥಳ, ಸುರೇಶ್ ಬಳ್ಳಾಲ್, ವಕೀಲರಾದ ಪಿ.ಪಿ ಹೆಗಡೆ, ಡಾ ಯಶೋವರ್ಮರು ಆಗಮಿಸಿ ಶುಭ ಹಾರೈಸಿದರು. ಫೈನಲ್ ಪಂದ್ಯಾಟದಲ್ಲಿ ತ್ರಿಭುವನ್ ಮೂಡಬಿದಿರೆ ಹಾಗೂ ಜೈನ್ ಮಿಲನ್ ಅಳಿಯೂರು ನಡುವಿನ ಜಿದ್ದಾಜಿದ್ದಿ ಪಂದ್ಯಾಟದಲ್ಲಿ ಅಳಿಯೂರು ತಂಡ ವಿಜೇತರಾಗಿ 30 ಸಾವಿರ ನಗದು ಹಾಗೂ ಟ್ರೋಫಿಯನ್ನು ಮುಡಿಗೇರಿಸಿತು. ತಂಡದ ಸಾಂಘಿಕ ಸಾಧನೆಗೆ ತರಬೇತುದಾರ ಸುಕುಮಾರ್ ಜೈನ್ ಕಡಂಬರು ಹರ್ಷ ವ್ಯಕ್ತ ಪಡಿಸಿದರು. ರಾಜ್ಯದ ಗಮನ ಸೆಳೆದ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸಂಘಟಕ ಶೀತಲ್ ಕುಮಾರ್ ಜೈನ್ ಧನ್ಯವಾದ ಸಲ್ಲಿಸಿದರು.