ಹೊಸದಿಲ್ಲಿ: 50 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಟಾರ್ ಶೂಟರ್ ಜಿತು ರೈ ಸ್ವರ್ಣ ಪದಕ ಹಾಗೂ ಅಮನ್ ಪ್ರೀತ್ ಸಿಂಗ್ ಇದೇ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡೆ ಫೆಡರೇಷನ್(ಐಎಸ್ಎಸ್ಎಫ್) ವಿಶ್ವಕಪ್ ಟೂರ್ನಿಯಲ್ಲಿ ಗೆದ್ದಿದ್ದಾರೆ.
230.1 ಅಂಕಗಳೊಂದಿಗೆ ಸ್ವರ್ಣ ಪದಕವನ್ನು ಜಿತು ರೈ ಹಾಗೂ 226.9 ಅಂಕಗಳೊಂದಿಗೆ ಅಮನ್ ಪ್ರೀತ್ ಸಿಂಗ್ ಬೆಳ್ಳಿ ಪದಕವನ್ನು ಡಾ ಕಾರ್ಣಿ ಸಿಂಗ್ ಶೂಟಿಂಗ್ ರೇಂಜ್ ನಲ್ಲಿ ನಡೆಯುತ್ತಿರುವ ಕೂಟದಲ್ಲಿ ಗೆದ್ದಿದ್ದಾರೆ.
ಮಂಗಳವಾರ ನಡೆದ 10 ಮಿ. ಏರ್ ಪಿಸ್ತೂಲ್ ವಿಭಾಗದಲ್ಲಿ ಜಿತು ಕಂಚಿನ ಪದಕ ಗೆದ್ದಿದ್ದು, ಜಿತು ರೈ ಒಂದೇ ಶೂಟಿಂಗ್ ವಿಶ್ವಕಪ್ ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.