ಮೂಡುಬಿದಿರೆ: ಗುಜರಾತಿನ ವಡೋದರದಲ್ಲಿ ನಡೆದ 62ನೇ ಶಾಲಾ ಅತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆಯ ತಂಡವು 3 ಚಿನ್ನ ಹಾಗೂ 1 ಕಂಚು ಪಡೆದು ಒಟ್ಟು 4 ಪದಕಗಳನ್ನು ಪಡೆದುಕೊಂಡಿದ್ದಾರೆ.
17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಜ್ಯೋತ್ಸ್ನಾ 100ಮೀ, 200ಮೀ ಓಟದಲ್ಲಿ ಚಿನ್ನದ ಪದಕ ಮತ್ತು ರಚನಾ ಆರ್. ಪೋಲ್ವಾಲ್ಟ್ ನಲ್ಲಿ ಕಂಚಿನ ಪದಕ, 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕರ್ನಾಟಕಕ್ಕೆ ಏಳು ಪದಕಗಳು ದೊರಕಿದ್ದು ಅದರಲ್ಲಿ 4 ಪದಕಗಳು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದ್ದು, ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.